
ಶತಮಾನದ ಮಹಾಮಳೆಗೆ ಮುಳುಗಿದ ಮುಂಬೈ! ವರುಣನ ಚಕ್ರವ್ಯೂಹದಲ್ಲಿ ಬಂಧಿಯಾಗುತ್ತಾ ಕರುನಾಡು?
ದೇಶಾದ್ಯಂತ ಮಳೆಯ ಅಬ್ಬರದಿಂದ ಹಲವು ರಾಜ್ಯಗಳಲ್ಲಿ ಸಾವು-ನೋವು ಮತ್ತು ಆಸ್ತಿ ಹಾನಿಗಳು ಸಂಭವಿಸಿವೆ. ತೆಲಂಗಾಣ, ದೆಹಲಿ, ಕೇರಳ, ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ. ಭಾರತೀಯ ಹವಾಮಾನ ಇಲಾಖೆಯು ಹಲವು ರಾಜ್ಯಗಳಿಗೆ ಮಳೆ ಎಚ್ಚರಿಕೆ ನೀಡಿದೆ.
ದೇಶಾದ್ಯಂತ ಕೆಲ ರಾಜ್ಯಗಳಲ್ಲಿ ಮಳೆ ರೌದ್ರನರ್ತನ ಮುಂದುವರೆದಿದೆ. ತೆಲಂಗಾಣ, ದೆಹಲಿ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಮುಂಗಾರು ಜೋರಾಗಿನೇ ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ಸಾವು-ನೋವು ಸಂಭವಿಸಿವೆ. ಇನ್ನು ಕೆಲ ರಾಜ್ಯಗಳಲ್ಲಿ ಆಸ್ತಿ ಹಾನಿಯೂ ಆಗಿದೆ. ಹಗೆನೇ ರಾಜ್ಯದಲ್ಲೂ ಸಹ ಮಳೆ ಮುಂದುವರೆದಿದ್ದು ಇಲ್ಲೂ ಆಸ್ತಿ ಹಾನಿಯುಂಟಾಗಿದೆ? ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ ಮೃತ್ಯು ಮಳೆ.
ಮಹಾರಾಷ್ಟ್ರದಲ್ಲಿ ಏಳು ಮತ್ತು ತಮಿಳುನಾಡಿನಲ್ಲಿ ಮೂವರು ಮಳೆಗೆ ಬಲಿಯಾಗಿದ್ದಾರೆ. ಮಳೆ ಹೆಚ್ಚು ಸುರಿದ ಕಡೆಗಳಲ್ಲಿ ದೊಡ್ಡ ಪ್ರಮಾಣದ ಆಸ್ತಿ ಹಾನಿಯೂ ಆಗಿದೆ. ಇದೆಲ್ಲವೂ ದೇಶದ ಬೇರೆ ರಾಜ್ಯಗಲ್ಲಿನ ಮಳೆ ರಿಪೋರ್ಟ್ ಆಯ್ತು. ಇಂದು ಬೆಂಗಳೂರಿಗೆ ಮಳೆರಾಯ ಒಂದಿಷ್ಟು ವಿರಾಮ ನೀಡಿದ್ದಾನೆ. ಆದ್ರೆ ಬೆಂಗಳೂರು ಹೊರತು ಪಡಿಸಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಮುಂಗಾರು ಜೋರಾಗಿನೇ ಸುರಿದಿದೆ. ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಅನ್ನೋದನ್ನು ಇಲ್ಲಿ ನೋಡೋಣ.
ರಾಜ್ಯದ ಇನ್ನು ಕೆಲ ಜಿಲ್ಲೆಗಳಾದ ಚಿಕ್ಕಮಗಳೂರು, ಕಾರವಾಡ, ಧಾರವಾಡ ಮತ್ತು ಕೊಪ್ಪಳ ಸೇರಿದಂತೆ ಇನ್ನೂ ಅನೇಕ ಜಿಲ್ಲೆಗಳಲ್ಲಿ ಇಂದು ದೊಡ್ಡ ಪ್ರಮಾಣದ ಮಳೆಯಾಗಿದೆ. ಮಳೆಯಿಂದಾಗಿ ಇಲ್ಲಿ ಏನೆಲ್ಲ ಅನಾಹುತಗಳು ಸಂಭವಿಸಿದವು. ಈ ತಿಂಗಳ ಅಂತ್ಯದವರೆಗೂ ದೇಶಾದ್ಯಂತ ಕೆಲ ರಾಜ್ಯಗಳಲ್ಲಿ ನಿರಂತರವಾಗಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಯಾವೆಲ್ಲ ರಾಜ್ಯಗಳು ಎಚ್ಚರಿಕೆಯಿಂದ ಇರಬೇಕು ಅನ್ನೋದನ್ನು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ಇದಾಗಿತ್ತು.