'ನನ್ನ ಮೇಲೆ ಷಡ್ಯಂತ್ರ ಮಾಡಿದವರಿಗೂ ಕರೋನಾ ಬಂದಿದೆ'
ವಿನಯ್ ಗುರೂಜಿ ಹೆಸರು ಹಾಳು ಮಾಡಲು ಷಡ್ಯಂತ್ರ/ ನನ್ನ ವಿರುದ್ಧ ಸಂಚು ಮಾಡಿದವರಿಗೂ ಕರೋನಾ ಬಂದಿದೆ/ ಸತ್ಯಕ್ಕೆ ಯಾವತ್ತಿಗೂ ಜಯ ಸಿಕ್ಕೆ ಸಿಗುತ್ತದೆ.
ಬೆಂಗಳೂರು(ಮಾ.11) ಗುರೂಜಿ ಹೆಸರು ಹಾಳು ಮಾಡಲು ಎರಡು ವರ್ಷದ ಹಿಂದೆಯೇ ಷಡ್ಯಂತ್ರ ನಡೆದಿತ್ತಂತೆ. ಎರಡು ವರ್ಷದ ಹಿಂದೆಯೇ ಷಡ್ಯಂತ್ರ ನಡೆಸಲು ಸಿದ್ಧತೆ ಮಾಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ನನ್ನ ಭಾಷಣದ ವಿಡಿಯೋವನ್ನು ಅವರಿಗೆ ಬೇಕಾದ ರೀತಿ ಎಡಿಟ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಚೀನಾಕ್ಕೆ ಹೇಗೆ ಕರೋನಾ ಬಂದಿದೆಯೋ ಅದೇ ರೀತಿ ಈ ರೀತಿ ಬ್ಲಾಕ್ ಮೇಲ್ ಮಾಡಲು ಮುಂದಾದವರಿಗೂ ಕರೋನಾ ಬಂದಿದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ.