ಸೆಲ್ಪಿ ಬಿಚ್ಚಿಟ್ಟ ಸತ್ಯ: ಪ್ರೀತಿಸಿ ಮದುವೆಯಾದ ಗಂಡನನ್ನೇ ಕೊಲೆ ಮಾಡಿದ್ದ ಪತ್ನಿ!

ಪ್ರೀತಿಸಿ ಮದುವೆಯಾದ ಗಂಡನನ್ನೇ ತನ್ನ ಪ್ರಿಯಕರನ ಜೊತೆಗೆ ಸೇರಿ ಕೊಲೆ ಮಾಡಿದ್ದಳು, ಆದರೆ ಅದನ್ನು ಆತ್ಮಹತ್ಯೆ ಎಂದು ನಂಬಿಸಿ ಪ್ರಿಯಕರನ ಜೊತೆಗೆ ಚಕ್ಕಂದವಾಡಿಕೊಂಡಿದ್ದವಳು, ಪ್ರಿಯಕರನೊಂದಿಗಿದ್ದ ಅದೊಂದು ಸೆಲ್ಪಿ ಪೋಟೋ ಆ ಇಬ್ಬರು ಕೊಲೆಗಟುಕರನ್ನು ಜೀವಾವಧಿ ಶಿಕ್ಷಯವರೆಗೆ ಕರೆದುಕೊಂಡು ಬಂದು ಬಿಟ್ಟಿದೆ.

Share this Video
  • FB
  • Linkdin
  • Whatsapp

ಕೋಲಾರ(ಸೆ.01): ತನ್ನ ಮಗನ ಕೊಲೆಯಿಂದ ಮನನೊಂದಿರುವ ವೃದ್ದೆ, ತನ್ನ ಮಗನ ಕೊಲೆ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ನ್ಯಾಯಾಲಯದ ಎದುರು ನ್ಯಾಯಕ್ಕಾಗಿ ಶಬರಿಯಂತೆ ಕಾದಿರುವ ಈಕೆಯ ಹೆಸರು ವಾಸಗಿ. ಕೋಲಾರ ಜಿಲ್ಲೆ ಕೆಜಿಎಫ್ ನಗರ ನಿವಾಸಿ.ವಾಸಗಿಯವರ ಎರಡನೇ ಮಗ ಸೋಮನಾಥ್ 2016 ಮಾರ್ಚ್‌ನಲ್ಲಿ ತಾನು ಪ್ರೀತಿಸಿ ಮದುವೆಯಾಗಿದ್ದ. ತನ್ನ ಪತ್ನಿ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಸಂತೋಷ್ ಎಂಬಾತನಿಂದ ಕೊಲೆಯಾಗಿ ಹೋಗಿದ್ದ. 

ಅದನ್ನು ಅಷ್ಟಕ್ಕೇ ಬಿಡದ ಸೋಮವಾಥ್ ತಾಯಿ 60 ವರ್ಷದ ಆ ವೃದ್ದೆ ವಾಸಗಿ ತನ್ನ ಮಗನದ್ದು ಆತ್ಮಹತ್ಯೆಯಲ್ಲಾ, ಅದೊಂದು ಕೊಲೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಈ ವೇಳೆ ವೃದ್ದೆಯ ದೂರನ್ನು ಆಲಿಸಿದ ಕೆಜಿಎಫ್‌ನ ರಾಬರ್ಟ್ಸನ್ ಪೇಟೆ ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ಮರು ತನಿಖೆ ಮಾಡಲು ಶುರುಮಾಡಿದ್ದರು. ಈ ವೇಳೆ ಇಡೀ ಪ್ರಕರಣಕ್ಕೆ ಸಾಕ್ಷಿಯಾಗಿ ತಿರುವು ಕೊಟ್ಟಿದ್ದ ಅದೊಂದು ಸೆಲ್ಪಿ ಪೋಟೋ ಆಧಾರವಿಗಿಟ್ಟುಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅದು ಆತ್ಮಹತ್ಯೆಯಲ್ಲಾ ಕೊಲೆ ಅನ್ನೋದನ್ನು ಸುಲಭವಾಗಿ ಆರೋಪಿತರಿಂದ ಬಾಯಿಬಿಡಿಸಿದ್ದರು. 

ಈ ವೇಳೆ ಸೋಮನಾಥನ ಕೊಲೆ ಮಾಡಿದ್ದ ಸೋಮನಾಥನ ಪತ್ನಿ ಅಶ್ವಿನಿ ಹಾಗೂ ಸಂತೋಷ್‌ನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಕೊಲೆಗಾರರಾದ ಹಾಕಿದ್ದ ಅಶ್ವಿನಿ ಹಾಗೂ ಅವಳ ಪ್ರಿಯಕರ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಕೋಲಾರದ ಎರಡನೇ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮೂಲಕ ಮಗನ ಸಾವಿನ ನ್ಯಾಯಕ್ಕಾಗಿ ಐದು ವರ್ಷಗಳ ಕಾಲ ಶಬರಿಯಂತೆ ನ್ಯಾಯಾಲಯಕ್ಕೆ ತಿರುಗಿದ್ದ ವೃದ್ದೆಗೆ ಕೊನೆಗೂ ನ್ಯಾಯ ಸಿಕ್ಕಿದೆ.

Related Video