3 ಮಕ್ಕಳನ್ನು ಬಿಟ್ಟು ಬಾಯ್‌ಫ್ರೆಂಡ್‌ ಜತೆ ಹೆಂಡತಿ ಪರಾರಿ; ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಗಂಡ

Extramarital Affair News: ಮುದ್ದಾದ ಕುಟುಂಬ, ಮೂರು ಮಕ್ಕಳು. ಆದರೆ ಆಕೆ ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಳು. ನಂತರ ದೇಶ ಬಿಟ್ಟು ಸೌದಿ ಅರೇಬಿಯಾಗೆ ಪ್ರಿಯಕರನೊಂದಿಗೆ ಪರಾರಿಯಾದಳು. ಇತ್ತ ಗಂಡ ಮಕ್ಕಳಿಗೂ ವಿಷಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

First Published Aug 19, 2022, 3:35 PM IST | Last Updated Aug 19, 2022, 3:49 PM IST

ತುಮಕೂರು: ಅದೊಂದು ತುಂಬು ಕುಟುಂಬ. ಗಂಡ, ಹೆಂಡತಿ ಮತ್ತು ಮುದ್ದಾ ಮೂರು ಮಕ್ಕಳು. ಆದರೆ ಇಡೀ ಕುಟುಂಬ ಹೆಂಡತಿ ಮಾಡಿದ ಒಂದು ತಪ್ಪಿನಿಂದ ಛಿದ್ರವಾಗಿದೆ. ಮದುವೆಯಾಗಿ ಮೂರು ಮಕ್ಕಳಿದ್ದರೂ ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವಳು ಕುಟುಂಬ ತೊರೆದಿದ್ದಾಳೆ. ಪ್ರಿಯಕರನ ಜೊತೆ ಸೌದಿ ಅರೇಬಿಯಾಗೆ ಓಡಿ ಹೋಗಿದ್ದಾಳೆ. ನಂತರ ಮೋಜು ಮಸ್ತಿ ಮಾಡುತ್ತಾ ಗಂಡನಿಗೆ ವಿಡಿಯೋ ಕರೆ ಮಾಡುತ್ತಿದ್ದಳು. ಗಂಡ ಮತ್ತು ಮಕ್ಕಳು ವಾಪಸ್‌ ಭಾರತಕ್ಕೆ ಬರುವಂತೆ ಎಷ್ಟು ಗೋಗರೆದರೂ ಬರದಿದ್ದಾಗ ಗಂಡ ಮಕ್ಕಳಿಗೂ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೆಂಡತಿ ಬಿಟ್ಟು ಹೋದ ದಿನದಿಂದ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದ ಎನ್ನಲಾಗಿದೆ. ಆತ ಮೃತಪಟ್ಟಿದ್ದು ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. 

ಈ ದುರಂತ ಘಟನೆ ನಡೆದಿರುವುದು ರಾಜಧಾನಿಯ ಪಕ್ಕದ ಜಿಲ್ಲೆ ತುಮಕೂರಿನಲ್ಲಿ. ತುಮಕೂರಿನ ಪಿಎಚ್‌ ಕಾಲೋನಿಯಲ್ಲಿ ವಾಸಿಸುತ್ತಿದ್ದ ಸಮೀವುಲ್ಲಾ ಎಂಬುವವನೇ ಮೃತ ದುರ್ದೈವಿ. ಸದ್ಯ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ನಡುವೆ ಮಕ್ಕಳು ಹೋರಾಡುತ್ತಿದ್ದಾರೆ. ತಾಯಿ ಮಾಡಿದ ತಪ್ಪಿಗೆ ಮಕ್ಕಳಿಗೆ ರೌರವ ನರಕ ಪ್ರಾಪ್ತಿಯಾಗಿದೆ. 

ಗಂಡನಿಗೆ ಒಂದು ಮಾತೂ ಹೇಳದೆ ದೇಶವನ್ನೇ ತೊರೆದು ಪ್ರಿಯಕರನೊಂದಿಗೆ ಸೌದಿ ಅರೇಬಿಯಾಗೆ ಹೆಂಡತಿ ಓಡಿಹೋಗಿದ್ದಾಳೆ. ಆಗಾಗ ಮೋಜು ಮಸ್ತಿ ಮಾಡುತ್ತಾ ವಿಡಿಯೋ ಕಾಲ್ ಮಾಡಿ ಗಂಡನನ್ನು ರೇಗಿಸುತ್ತಿದ್ದಳು ಎಂದು ತಿಳಿದುಬಂದಿದೆ. ಪತ್ನಿ ವಾಪಸ್ ಬರಲ್ಲ, ಎಂದಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇಶ ಬಿಟ್ಟು ಸೌದಿಗೆ ಹೋದ ನಂತರ ಅಲ್ಲಿ ಮನೆ ಕೆಲಸ ಮಾಡಿಕೊಂಡು ಹೆಂಡತಿ ಸಾಹೇರಾ ಭಾನು ಅರಾಮಾಗಿದ್ದಾಳೆ. ಹೆಂಡತಿ ವಿಡಿಯೋ ಕಾಲ್‌ ಮಾಡಿ ಲೇವಡಿ ಮಾಡುತ್ತಿದ್ದರೂ ವಾಪಸ್‌ ಬಂದು ಬಿಡು ಎಂದು ಗಂಡ ಗೋಗರೆಯುತ್ತಿದ್ದ. ಮಕ್ಕಳೂ ಸಹ ಹಲವು ಬಾರಿ ಕಣ್ಣೀರು ಹಾಕಿದ್ದು. ಮಕ್ಕಳ ಕಣ್ಣೀರಿಗೂ ಸಾಹೇರಾ ಭಾನು ಕರಗಲಿಲ್ಲ. 

ಅಮ್ಮ ಬರಲ್ಲ ಎಂಬ ವಿಚಾರ ಅರಿವಾಗಿ ತಂದೆಯೊಂದಿಗೆ ಮೂವರು ಮಕ್ಕಳು ಇಂದು ವಿಷ ಸೇವಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಈಗ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಸಮೀವುಲ್ಲಾ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ತಿಲಕ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Video Top Stories