
ಗಂಡನ ಮೊಬೈಲ್‌ನಲ್ಲಿತ್ತು ಅತ್ತೆ ಜೊತೆಗಿನ ಸರಸದ ಸಾಕ್ಷಿ! ಮದುವೆಯಾಗಿ 15 ದಿನಕ್ಕೆ ಗಂಡನ ಅಸಲಿಯತ್ತು ಬಯಲು!
ಮದುವೆಯಾಗಿ ಕೇವಲ ೧೫ ದಿನಗಳಲ್ಲೇ ಗಂಡನಿಗೆ ಅಕ್ರಮ ಸಂಬಂಧವಿರುವುದು ಪತ್ನಿಗೆ ತಿಳಿದುಬಂದಿತು. ಆದರೆ ಆತ ಸಂಬಂಧ ಹೊಂದಿದ್ದವಳು ಆಕೆಯ ತಾಯಿಯೇ ಎಂಬ ಅಘಾತಕಾರಿ ಸತ್ಯ ಬಯಲಾಯಿತು. ಈ ವಿಚಿತ್ರ ಘಟನೆಯ ಕರಾಳ ಕಥೆಯನ್ನು ತಿಳಿದುಕೊಳ್ಳಿ.
ಅವರಿಬ್ಬರು ನವದಂಪತಿಗಳು.ಮದುವೆಯಾಗಿ 15 ದಿನಗಳಾಗಿದ್ವಷ್ಟೇ... ಸಂಬಂಧಿಕನನ್ನೇ ನೋಡಿ ಹೆತ್ತವರು ಮದುವೆ ಮಾಡಿಕೊಟ್ಟಿದ್ರು. ಆದ್ರೆ ಮದುವೆಯಾಗಿ ಗಂಡನ ಮನೆ ಸೇರಿದ ಆ ಹೆಣ್ಣುಮಗಳಿಗೆ 15 ದಿನದಲ್ಲೇ ಗಂಡನಿಗೆ ಅಫೇರ್ ಇರೋದು ಗೊತ್ತಾಗಿತ್ತು. ಜೋರು ಜಗಳ ಮಾಡಿದ್ಲು. ಆದ್ರೆ ಆ ಅಫೇರ್ ಬಗ್ಗೆ ಕೆಣಕಿದಾಗ ಆ ಹೆಣ್ಣುಮಗಳಿಗೆ ಜೀವಮಾನದ ಶಾಕ್ ಸಿಕ್ಕಿತ್ತು.. ಕಾರಣ ಗಂಡ ಅಫೇರ್ ಇಟ್ಟುಕೊಂಡಿದ್ದಿದ್ದು ಯಾರ ಜೊತೆ ಗೊತ್ತಾ..? ಆಕೆಯ ಅಮ್ಮನ ಜೊತೆ... ಯಸ್ ಅಳಿಯ ಮತ್ತು ಅತ್ತೆ ನಡುವೆ ಅಲ್ಲಿ ಲವ್ವಿಡವ್ವಿ ನಡೆದಿರೋದು ಪಸರ್ ಆಗಿಬಿಟ್ಟಿತ್ತು.. ಅಷ್ಟಕ್ಕೂ ಏನಿದು ಫ್ಯಾಮಿಲಿ ಡ್ರಾಮ..? ಯಾರು ಆ ಅಳಿಯ ಮತ್ತು ಅತ್ತೆ. ಒಂದು ವಿಚಿತ್ರ ಕೌಟುಂಬಿಕ ಕಲಹದ ಕಥೆಯೇ ಇವತ್ತಿನ ಎಫ್.ಐ.ಆರ್.
ನೂರಾರು ಕನಸು ಕಟ್ಟಿಕೊಂಡು ಗಂಡನ ಮನೆಗೆ ಹೋದವಳಿಗೆ ಕಂಡಿದ್ದು ಗಂಡ ಮತ್ತು ತಾಯಿಯ ಅಕ್ರಮ ಸಂಬಂಧ.. ಆತ ಕಳಿಸಿದ್ದ ಅಶ್ಲೀಲ ಮೆಸೆಜ್ಗಳನ್ನ ಆಕೆ ತನ್ನ ತಂದೆಗೆ ಕಳುಹಿಸುವ ಪ್ರಯತ್ನ ಮಾಡಿದ್ಲು.. ಆದ್ರೆ ಆಷ್ಟೊತ್ತಿಗೆ ಆ ಕಿರಾತಕ ಅವಳನ್ನ ಬೆದರಿಸಿ ಮೊಬೈಲ್ ಕಿತ್ತುಕೊಂಡು ಹೋಗಿದ್ದ.. ನಂತರ ಪಂಚಾಯ್ತಿಗೆ ಹೋಗೋಣ ಅಂತ ಕರೆದುಕೊಂಡು ಹೋಗಿ ಆಕೆಯನ್ನ ನಡುದಾರಿಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದ.. ತಂದೆಗೆ ಕಾಲ್ ಮಾಡಿದ್ರೆ ಅವನದ್ದು ಒಂದು ರೀತಿಯ ಗೋಳು.. ಅಲ್ಲಿ ಹೆಂಡತಿ ಕೂಡ ಎಸ್ಕೇಪ್ ಆಗಿದ್ಲು.. ಅತ್ತ ಗಂಡ.. ಇತ್ತ ಅಮ್ಮ ಇಬ್ಬರೂ ನಾಪತ್ತೆ.. ಇಬ್ಬರೂ ಊರೇ ಬಿಟ್ಟಿದ್ರು.. ಪೊಲೀಸರ ಬಳಿ ಹೋದ್ರೂ ಪ್ರಯೋಜನವಾಗೊಲ್ಲ.. ಆದ್ರೆ ಯಾವಾಗ ಟಿವಿ ಚಾನಲ್ಗಳಲ್ಲಿ ಸುದ್ದಿ ಬಂತೋ ಆ ತಾಯಿ ಓಡೋಡಿ ಬಂದಿದ್ಲು... ನಾನೇ ಕರೆಕ್ಟು ಅಂದಿದ್ಲು.
ಅಳಿಯ ಗಣೇಶ್ ಪತ್ತೆಯಾದ ಬಳಿಕ ಈ ಪ್ರಕರಣ ಇನ್ಯಾವ ತಿರುವು ಪಡೆದುಕೊಳ್ಳುತ್ತೋ ಗೊತ್ತಿಲ್ಲ. ಆದ್ರೆ ದೇವರಂತೆ ಕಾಣಬೇಕಿದ್ದ ಅತ್ತೆಯ ಜೊತೆಯೇ ಈ ಕಿರಾತಕ ಅಕ್ರಮ ಸಂಬಂಧ ಬೆಳಸಿದ್ದಾನಂದ್ರೆ ಈತನಿಗೆ ಏನಂಥ ಕರೆಯಬೇಕೋ ಗೊತ್ತಿಲ್ಲ.