
Cover Story: ಬಿಬಿಎಂಪಿಯಲ್ಲಿ ಖಾತಾ ಮಾಡಿಸಲು ಕೊಡ್ಬೇಕು ಲಕ್ಷ ಲಕ್ಷ ಲಂಚ, ಇದು ಕಡ್ಡಾಯ!
ಬಿಬಿಎಂಪಿ ಭ್ರಷ್ಟಾಚಾರದ ಕೂಪವಾಗಿದೆ. ಇಲ್ಲಿ ಕಾಸು ಬಿಚ್ಚದೇ ಫೈಲ್ ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಮೂವ್ ಆಗಲ್ಲ. ಎಚ್‌ಎಎಲ್ ನಿವೃತ್ತ ವ್ಯಕ್ತಿಯೊಬ್ಬರು ತಮ್ಮ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಮಾಡುವ ವಿಚಾರವಾಗಿ ಬಿಬಿಎಂಪಿಗೆ ಹೋದರೆ, ಇಲ್ಲಿ ಮಾತು ಬೇಡ ಸಾರ್, ಮನೆಗೆ ಬರ್ತೀವಿ ಅಂತ ಬರುತ್ತಾರೆ. ಲಕ್ಷಗಟ್ಟಲೇ ಲಂಚ ಕೇಳುತ್ತಾರೆ.
ಬಿಬಿಎಂಪಿ ಭ್ರಷ್ಟಾಚಾರದ ಕೂಪವಾಗಿದೆ. ಇಲ್ಲಿ ಕಾಸು ಬಿಚ್ಚದೇ ಫೈಲ್ ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಮೂವ್ ಆಗಲ್ಲ. ಎಚ್‌ಎಎಲ್ ನಿವೃತ್ತ ವ್ಯಕ್ತಿಯೊಬ್ಬರು ತಮ್ಮ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಮಾಡುವ ವಿಚಾರವಾಗಿ ಬಿಬಿಎಂಪಿಗೆ ಹೋದರೆ, ಇಲ್ಲಿ ಮಾತು ಬೇಡ ಸಾರ್, ಮನೆಗೆ ಬರ್ತೀವಿ ಅಂತ ಬರುತ್ತಾರೆ. ಲಕ್ಷಗಟ್ಟಲೇ ಲಂಚ ಕೇಳುತ್ತಾರೆ. 20 ಸಾವಿರ ಪಡೆದು ಹೋಗುತ್ತಾರೆ.
ದಾವಣಗೆರೆ: ಅಲ್ಲಾ ಸ್ವಾಮಿ ಢೋಂಗಿ ಬಾಬಾನ ಬಣ್ಣ ಬಯಲು ಮಾಡಿದ ಕವರ್ ಸ್ಟೋರಿ
ಆಫೀಸಿಗೆ ಹೋಗಿ ಫೈಲ್ ಎಲ್ಲಿಯವರೆಗೆ ಬಂತು ಎಂದು ಕೇಳಿದ್ರೆ ಪೂರ್ಣ ಹಣ ಪಾವತಿ ಮಾಡಿ. ಆಮೇಲೆ ಫೈಲ್ ಮೂವ್ ಮಾಡೋಣ ಅಂತಾರೆ. ಇವೆಲ್ಲಾ ಕವರ್ ಸ್ಟೋರಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಲ್ಲಾ ಕಾರ್ಯಾಚರಣೆ ಬಳಿಕ ಚಾನಲ್ ಲೋಗೋ ಹಿಡಿದು ಕಚೇರಿಗೆ ಹೋದರೆ ಈ ಅಧಿಕಾರಿಗಳು ಉತ್ತರ ಕೊಡದೇ ಎಸ್ಕೇಪ್ ಆಗುತ್ತಾರೆ. ಈ ಅಧಿಕಾರಿಗಳ ಬಗ್ಗೆ ಆಯುಕ್ತರಾದ ತುಷಾರ್ ಗಿರಿನಾಥ್ ಗಮನಕ್ಕೆ ತರಲಾಗಿದೆ. ಎಸಿಬಿಗೂ ದೂರು ನೀಡಲಾಗಿದೆ. ಇಂತಹ ಲಂಚಕೋರ ಅಧಿಕಾರಿಗಳ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಿದೆ.