ಬೆಂಗಳೂರಲ್ಲಿ ಕರೋನಾ  ಪೊಲೀಸ್ ಫೇಕ್ ಪಾಸ್ ಕಂಡು ಹೋಂ ಮಿನಿಸ್ಟರ್‌ಗೆ ಶಾಕ್!

ಕರೋನ ನಕಲಿ ಪೊಲೀಸ್ ಪಾಸ್ ಕಂಡು ಹೋಮ್ ಮಿನಿಸ್ಟರ್ ಕೂಡ ಶಾಕ್/ ಕೆಜಿ ಹಳ್ಳಿ ಮುಖ್ಯ ರಸ್ತೆಯಲ್ಲಿ ಸರ್ಪ್ರೈಸ್ ವಿಸಿಟ್ ವೇಳೆ ನಕಲಿ ಪಾಸ್ ಪತ್ತೆ/ ಚೆಕ್ಕಿಂಗ್ ಚೇಳೆ ಡುಪ್ಲಿಕೇಟ್ ಕರೋನಾ ಪೊಲೀಸ್ ಪಾಸ್ ಪತ್ತೆ/  ಹೋಮ್ ಮಿನಿಸ್ಟರ್ ಚೆಕ್ಕಿಂಗ್ ವೇಳೆ ಸಿಕ್ಕಿ ಬಿದ್ದ ಡುಪ್ಲೀಕೇಟ್ ಪಾಸ್ ಹೊಂದಿದ್ದ ವ್ಯಕ್ತಿಗಳು/ ನಕಲಿ ಪಾಸ್ ಹೊಂದಿದ್ದ ವಾಹನ ಸೀಜ್ 

First Published Apr 8, 2020, 9:58 PM IST | Last Updated Apr 8, 2020, 9:59 PM IST

ಬೆಂಗಳೂರು(ಏ. 08) ಕೊರೋನಾ ಹಾವಳಿ ನಡುವೆ  ನಕಲಿ ಪೊಲೀಸ್ ಪಾಸ್ ಕಂಡು ಹೋಮ್ ಮಿನಿಸ್ಟರ್ ಹೌಹಾರಿದ್ದಾರೆ.  ಬೆಂಗಳೂರಿನಲ್ಲಿ ಫೀಲ್ಡಿಗಿಳಿದ ಸಚಿವ ಬಸವರಾಜ್ ಬೊಮ್ಮಾಯಿ ತಾವೇ ಮುಂದೆ ನಿಂತು ವಾಹನ ತಪಾಸಣೆ ಕೈಗೊಂಡಿದ್ದರು.

1300 ಜನ ಕರ್ನಾಟಕದಿಂದ ಜಮಾತ್‌ ಗೆ ಹೋಗಿದ್ದರು, ಉಳಿದವರೆಲ್ಲಿ?

ಕೆಜಿ ಹಳ್ಳಿ ಮುಖ್ಯ ರಸ್ತೆಯಲ್ಲಿ ಪರಿಶೀಲನೆ ವೇಳೆ ಡುಪ್ಲಿಕೇಟ್ ಕರೋನಾ ಪೊಲೀಸ್ ಪಾಸ್ ಪತ್ತೆಯಾಗಿದೆ. ಗೂಡ್ಸ್ ಆಟೋ ಹಾಗೂ ಒಂದು ಕಾರ್ ನಲ್ಲಿ ಫೇಕ್ ಪಾಸ್ ಪತ್ತಯಾಗಿದೆ. ಇವರು ಓರಿಜಿನಲ್ ಪಾಸ್ ಅನ್ನು ಕಲರ್ ಝರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದರು.  ನಕಲಿ ಪಾಸ್ ಹೊಂದಿದ್ದವರ ವಾಹನ ಸೀಜ್ ಮಾಡಲಾಗಿದೆ.