ಬಿರಿಯಾನಿ..ಕುಷ್ಕಾ..ಲೇಕೆ ಆವೋ.. ಪಾದರಾಯನ ಪುಂಡರ ಧಿಮಾಕು!

ಕೊರೋನಾ ವಿರುದ್ಧದ ಹೋರಾಟ/ ನಿಲ್ಲದ ಪಾದರಾಯನಪುರ ಪುಂಡರ ಪುಂಟಾಟ/ ಹಜ್ ಭವನದಲ್ಲಿ ಪಾದರಾಯನಪುರ‌ ಪುಂಡರ ಕಿರಿಕ್/ ಬಿರಿಯಾನಿ..ಕುಷ್ಕಾ..ಲೇಕೆ ಆವೋ..ಸಾಬ್.

Share this Video
  • FB
  • Linkdin
  • Whatsapp

ಬೆಂಗಳೂರು( ಏ. 26) ಮಾಡಿದ ಕೆಟ್ಟ ಕೆಲಸಕ್ಕೆ ಇವರನ್ನು ಬಂಧನ ಮಾಡಲಾಗಿದೆ. ಕೊರೋನಾ ಆತಂಕ ಒಂದು ಕಡೆ ಹೆಚ್ಚಾಗುತ್ತಲೇ ಇದೆ. ಆದರೆ ಇವರಿಗೆ ಮಾತ್ರ ಬಿರಿಯಾನಿ ಬೇಕಂತೆ!

ರಾಮನಗರದಿಂದ ಹಜ್ ಭವನಕ್ಕೆ ಕರೆದು ತಂದಿದ್ದರೂ ಇವರ ಕಿರಿಕ್ ಕಡಿಮೆ ಆಗಿಲ್ಲ. ಹಜ್ ಭವನದಲ್ಲಿ ಪಾದರಾಯನಪುರ‌ ಪುಂಡರು ಕಿರಿಕ್ ಮಾಡಿದ್ದಾರೆ. ಊಟದ ಮೆನ್ಯು ಬದಲಿಸುವಂತೆ ತಾಕೀತು ಮಾಡಿದ್ದಾರೆ!

ತಬ್ಲಿಘಿ ಜಮಾತ್ ಪ್ರಶ್ನಿಸಿದರೆ ಮುಸ್ಲಿಂ ಸಮುದಾಯ ಟಾರ್ಗೆಟ್ ಮಾಡಿದಂತಾ?

"ಬಿರಿಯಾನಿ..ಕುಷ್ಕಾ..ಲೇಕೆ ಆವೋ..ಸಾಬ್.."ಅಂತ ಡಿಮ್ಯಾಂಡ್ ಇಟ್ಟಿದ್ದಾರೆ. ಬೆಳಿಗ್ಗೆ ಎಲ್ಲ ಸೋಂಕಿತರಿಗೂ ಒಂದೇ ಮಾದರಿಯ ತಿಂಡಿ-ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪಾದರಾಯನಪುರ‌ ಪುಂಡರು ಬಿರಿಯಾನಿಯೇ ಬೇಕು ಅಂತ ಹಠ ಹಿಡಿದಿದ್ದಾರೆ.

ಹಿರಿಯ ಅಧಿಕಾರಿಗಳಿಗೆ ಈ ವಿಷಯ ತಿಳಿಸ್ತಿವಿ ಈಗ ಇದೇ ತಿನ್ನಿ ಅಂತ ಸಿಬ್ಬಂದಿ ಹೇಳಿದ್ದಾರೆ. ಆದರೆ ಪುಂಡರ ಹಾವಳಿಗೆ ಕೆಲಹೊತ್ತು ಸಿಬ್ಬಂದಿ ಕಕ್ಕಾಬಿಕ್ಕಿಯಾಗುವಂತಹ ಸ್ಥಿತಿ ನಿರ್ಮಾಣ ಆಗಿತ್ತು. 

ಬೆಂಗಳೂರಿನ ಚಾಮರಾಜಪೇಟೆ ವ್ಯಾಪ್ತಿಯ ಪಾದರಾಯನಪುರಕ್ಕೆ ತೆರಳಿದ್ದ ವೈದ್ಯ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ಅಲ್ಲಿನ ಸ್ಥಳೀಯರು ಹಲ್ಲೆ ಮಾಡಿದ್ದರು. ಹಲ್ಲೆಕೋರರನ್ನು ಬಂಧಿಸಿದ ಪೊಲೀಸರು ಅವರನ್ನು ರಾಮನಗರ ಕಾರಾಗೃಹಕ್ಕೆ ಕಳಿಸಿದ್ದರು. ಆದರೆ ಗಲಭೆಕೋರರಲ್ಲಿ ಕೆಲವರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಮತ್ತೆ ಅವರನ್ನು ಬೆಂಗಳೂರಿಗೆ ಕರೆತರಲಾಗಿತ್ತು. 

Related Video