ಚಂದ್ರು ಮರ್ಡರ್ ಸೀಕ್ರೆಟ್ 171: ಕೊಲೆಗೆ ಕಾರಣ ರಸ್ತೆಯಲ್ಲಿ ಬೈಕ್‌ ತಾಕಿದ್ದಲ್ಲ, ಮತ್ತೇನು..?

ಮೂರು ತಿಂಗಳ ಹಿಂದೆ ಜೆ.ಜೆ.ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರು (Chandru murder Case) ಎಂಬಾತನ ಹತ್ಯೆಗೆ ರಸ್ತೆಯಲ್ಲಿ ಗುರಾಯಿಸಿದ್ದಕ್ಕೆ ಶುರುವಾದ ಜಗಳವು ಕಾರಣವಾಗಿದೆ ಎಂದು ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ (CID) ಆರೋಪ ಪಟ್ಟಿಸಲ್ಲಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು. 17): ಮೂರು ತಿಂಗಳ ಹಿಂದೆ ಜೆ.ಜೆ.ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರು (Chandru murder Case) ಎಂಬಾತನ ಹತ್ಯೆಗೆ ರಸ್ತೆಯಲ್ಲಿ ಗುರಾಯಿಸಿದ್ದಕ್ಕೆ ಶುರುವಾದ ಜಗಳವು ಕಾರಣವಾಗಿದೆ ಎಂದು ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ (CID) ಆರೋಪ ಪಟ್ಟಿಸಲ್ಲಿಸಿದೆ.

‘ರಸ್ತೆಯಲ್ಲಿ ಗುರಾಯಿಸಿದ್ದಕ್ಕೆ ಚಂದ್ರು ಹಾಗೂ ಶಾಹಿದ್‌ ಪಾಷ ನಡುವೆ ಜಗಳ ಶುರುವಾಗಿದೆ. ಆಗ ಇಬ್ಬರು ಪರಸ್ಪರ ಬೈದಾಡಿಕೊಂಡಿದ್ದಾರೆ. ಈ ಹಂತದಲ್ಲಿ ಶಾಹಿದ್‌, ‘ತನಗೆ ಕನ್ನಡ ಅರ್ಥವಾಗಲ್ಲ. ನೀನು ಉರ್ದುವಿನಲ್ಲಿ ಹೇಳು’ ಚಂದ್ರು ಹಾಗೂ ಆತನ ಗೆಳೆಯ ಸೈಮನ್‌ಗೆ ತಾಕೀತು ಮಾಡುತ್ತಾನೆ. ಮತ್ತೆ ಮಾತಿನ ಚಕಮಕಿ ಮುಂದುವರೆದಾಗ ಸಿಟ್ಟಿಗೆದ್ದು ಚಂದ್ರುವಿಗೆ ಶಾಹಿದ್‌ ಡ್ಯಾಗರ್‌ನಿಂದ ಇರಿದಿದ್ದಾನೆ. ಆದರೆ ಭಾಷ ದ್ವೇಷದಿಂದ ಈ ಹತ್ಯೆ ನಡೆದಿಲ್ಲ. ಕ್ಷುಲ್ಲಕ ಬೀದಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ಸಿಐಡಿ ಸ್ಪಷ್ಟಪಡಿಸಿದೆ. ಮೂರು ತಿಂಗಳಲ್ಲಿ ಚಂದ್ರು ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಸಿಐಡಿ, ಜು.1ರಂದು 180 ಪುಟಗಳ ಆರೋಪ ಪಟ್ಟಿಸಲ್ಲಿಸಿದೆ. 

Related Video