ರೆಸಾರ್ಟ್‌ನಲ್ಲಿ 5 ಹುಡುಗರು, 2 ಹುಡುಗಿಯರು; ಸ್ವಿಮ್ಮಿಂಗ್ ಪೂಲ್‌ನಲ್ಲಿದ್ದ ಯುವತಿಯರ ನೋಡಿ ಬಂದ ಅಪರಿಚಿತರು...

ಕಡುಬಡತನದಲ್ಲಿ ಹುಟ್ಟಿ ಬೆಳೆದು, ಕಷ್ಟಪಟ್ಟು ಓದಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಯುವಕ ಪುನೀತ್ ಸೇರಿ 5 ಜನ ಹುಡುಗರು, 2 ಜನ ಹುಡುಗಿಯರು ರೆಸಾರ್ಟ್‌ಗೆ ಹೋಗಿದ್ದಾರೆ. ಹುಡುಗಿಯರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವುದನ್ನು ನೋಡಿ ಬಂದ ಮೂವರು ಅಪರಿಚಿತರು...

Share this Video
  • FB
  • Linkdin
  • Whatsapp

ಕಡುಬಡತನದಲ್ಲಿ ಹುಟ್ಟಿ ಬೆಳೆದು, ಕಷ್ಟಪಟ್ಟು ಓದಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಯುವಕ ಪುನೀತ್ ಸೇರಿ 5 ಜನ ಹುಡುಗರು, 2 ಜನ ಹುಡುಗಿಯರು ರೆಸಾರ್ಟ್‌ಗೆ ಹೋಗಿದ್ದಾರೆ. ಹುಡುಗಿಯರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವುದನ್ನು ನೋಡಿ ಬಂದ ಮೂವರು ಅಪರಿಚಿತರು ಸುಖಾ ಸುಮ್ಮನೆ ಯುವಕ ಪುನೀತನನ್ನು ಮನಬಂದಂತೆ ಥಳಿಸಿ ಆತನ ಪ್ರಾಣವನ್ನೇ ತೆಗೆದಿದ್ದಾರೆ.

ಪುನೀತ್ ಚಾರ್ಟಡ್​ ಅಕೌಂಟೆಂಟ್​​ ಸ್ಟೂಡೆಂಟ್​. ಜೊತೆಗೆ ಆರ್​​​.ಎಸ್​​​.ಎಸ್‌ನಲ್ಲಿ ಸ್ವಯಂ ಸೇವಕ. ಅಪ್ಪ ಆಟೋ ಡ್ರೈವರ್​​ ಆಗಿ ಕೆಲಸ ಮಾಡುತ್ತಿದ್ದರೆ, ಅಮ್ಮ ಮನೆಗೆಲಸ ಮಾಡುತ್ತಿದ್ದಳು. ಮನೆಯಲ್ಲಿ ಕಡುಬಡತನ ಇದ್ದರೂ ಮಗನ ಓದಿಗೆ ಮಾತ್ರ ಕಿಂಚಿತ್ತೂ ಸೌಕರ್ಯ ಕಡಿಮೆ ಮಾಡಿರಲಿಲ್ಲ. ಆತ ಕೂಡ ತನ್ನ ಜವಬ್ದಾರಿಯನ್ನ ತಿಳಿದು ಕಷ್ಟ ಪಟ್ಟು ಓದುತ್ತಿದ್ದ. ಇನ್ನೇನು ಕೆಲಸಕ್ಕೆ ಸೇರಿ ಮೊದಲ ತಿಂಗಳ ಸಂಬಳ ಪಡೆಯಬೇಕು ಎನ್ನುವಷ್ಟರಲ್ಲೇ ಆತ ಹೆಣವಾಗಿದ್ದಾನೆ.

ಕೆಲಸ ಸಿಕ್ಕಿದ ಖುಷಿಯಲ್ಲಿ ಸ್ನೇಹಿತರ​​ ಜೊತೆಯಲ್ಲಿ ವೀಕೆಂಡ್​​ ಪಾರ್ಟಿ ಮಾಡಲು ಹೋದವನು ಬೆಳಗಾಗುವಷ್ಟರಲ್ಲಿ ಹೆಣವಾಗಿ ಬಿದ್ದಿದ್ದಾನೆ. ಇಲ್ಲಿ ಪರಿಚಯವೇ ಇಲ್ಲದವರು ಈ ಪಾಪದ ಹುಡುಗನನ್ನು ಭೀಕರವಾಗಿ ಥಳಿಸಿ ಹೊಡೆದು ಕೊಂದು ಮುಗಿಸಿದ್ದಾರೆ. ಅಷ್ಟಕ್ಕೂ ಈ ಪುನೀತ್​ನನ್ನ ಅವರು ಕೊಂದಿದ್ದೇಕೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ..

ಇದನ್ನೂ ಓದಿ: ₹ 40 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಹೆಣ ಕೆಡವಿದ ಸಂಬಂಧಿಕ!

ದೀಪಾವಳಿ ರಜೆ ಇದ್ದಿದ್ದರಿಂದ ಸ್ನೇಹಿತರೆಲ್ಲಾ ಸೇರಿ ಪ್ರವಾಸಕ್ಕೆ ಹೋಗಲು ಪ್ಲಾನ್​ ಮಾಡಿದ್ದರು. ಅದಕ್ಕಾಗಿ ಅವರು ಆಯ್ದುಕೊಂಡಿದ್ದು ಸ್ನೇಹಿತನ ರಾಮನಗರದ ರೆಸಾರ್ಟ್​. ಎಲ್ಲಾ ಪ್ಲಾನ್​ ಮಾಡಿಕೊಂಡು ಆವತ್ತು ಆ ರೆಸಾರ್ಟ್‌ಗೆ ಹೋಗಿದ್ದಾರೆ. ಆ ಸ್ನೇಹಿತರ ಗುಂಪಿನಲ್ಲಿ ಇಬ್ಬರು ಹೆಣ್ಣುಮಕ್ಕಳು ಕೂಡ ಇದ್ದರು. ಹೆಣ್ಣು ಮಕ್ಕಳು ಸ್ವಿಮ್ಮಿಂಗ್​ ಪೂಲ್‌ನಲ್ಲಿ ಎಂಜಾಯ್​ ಮಾಡುತ್ತಿದ್ದರೆ ಹುಡುಗರು ಅಡುಗೆ ಮಾಡುವುದರಲ್ಲಿ ಬ್ಯುಸಿ ಆಗಿದ್ದರು. ಈ ಸಮಯದಲ್ಲಿ ರೆಸಾರ್ಟಿನ್ ಅಕ್ಕಪಕ್ಕದಲ್ಲಿ ವಾಸಿಸುವ ಮೂವರು ಈ ರೆಸಾರ್ಟಿಗೆ ಬಂದಿದ್ದಾರೆ. ಆಗ ಹೊರಗೆ ಸ್ವಮ್ಮಿಂಗ್‌ ಪೋಲ್‌ನಲ್ಲಿ ಈಜಾಡುತ್ತಾ ಮಜಾ ಮಾಡುತ್ತಿದ್ದ ಹೆಣ್ಣು ಮಕ್ಕಳು ಗಾಬರಿಗೊಂಡು ಕಿರುಚಿದ್ದಾರೆ. ರಾತ್ರಿ ವೇಳೆ ಹುಡುಗಿಯರನ್ನು ಹಾಳು ಮಾಡುವುದಕ್ಕೆ ರೆಸಾರ್ಟ್‌ಗೆ ಕರೆದುಕೊಂಡು ಬಂದಿದ್ದೀರಾ? ಎಂದು ಗದರಿಸುತ್ತಾ ನಾವು ಅವರನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳಿ ಜೋರಾಗಿ ಕೂಗಾಡಿದ್ದಾರೆ. ಆದರೆ, ಇಲ್ಲಿ ಹೆಣ್ಣುಮಕ್ಕಳ ರಕ್ಷಣೆ ಹೆಸರಲ್ಲಿ ರೆಸಾರ್ಟ್‌ಗೆ ಬಂದ ಆಗಂತುಕರು ಪುನೀತ್ನ ಹೆಣ ಬೀಳಿಸಿದ್ದಾರೆ.

ಬಡತನ ಕುಟುಂಬದಲ್ಲಿ ಹುಟ್ಟಿ ಬೆಳೆದು, ಕಷ್ಟಪಟ್ಟು ಓದಿ ಕೆಲಸಕ್ಕೆ ಸೇರಿಕೊಂಡು ಜೀವನ ರೂಪಿಸಿಕೊಳ್ಳುವ ಜೊತೆಗೆ, ಒಂದಿಷ್ಟು ಸ್ನೇಹಿತರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವುದಕ್ಕೆ ರೆಸಾರ್ಟ್‌ಗೆ ಹೋದ ಪುನೀತನ ಸಾವು ನಿಜಕ್ಕೂ ಅನ್ಯಾಯವಾದದ್ದಾಗಿದೆ. ಪಾರ್ಟಿ ಮಾಡಲು ಹೋದವನು ಏನೂ ತಪ್ಪು ಮಾಡದೇ ಮಸಣ ಸೇರಿದ್ದಾನೆ. ಇನ್ನು ಸುಖಾಸುಮ್ಮನೆ ಅವನ ಹೆಣ ಹಾಲಿದ ಆ ಕಿರಾತಕರಿಗೆ ಎಂತಹ ಶಿಕ್ಷೆ ಕಟ್ಟರೂ ಕಡಿಮೆಯೇ.

Related Video