ರಾಗಿಣಿ ಜೊತೆ ನಂಟಿದ್ದ ಮತ್ತೊಬ್ಬ ಪೆಡ್ಲರ್ ಸಿಸಿಬಿ ವಶಕ್ಕೆ; ಡ್ರಗ್ಗಿಣಿಗೆ ಜೈಲು ಫಿಕ್ಸ್?
ರಾಗಿಣಿ ಆಪ್ತ ರವಿಶಂಕರ್ ಹೇಳಿಕೆ ಹಲವು ಪೆಡ್ಲರ್‌ಗಳಿಗೆ ಮುಳುವಾಗಿದೆ. ತನಿಖೆ ವೇಳೆ 'ಶ್ರೀ' ಎಂಬಾತನ ಬಗ್ಗೆ ಸುಳಿವು ಸಿಕ್ಕಿದ್ದು ಆತನ ಮನೆ ಮೇಲೆ ದಾಳಿ ಮಾಡಲಾಗಿದೆ. ಆತನ ಫ್ಲಾಟ್‌ನಲ್ಲಿ ಅಪಾರ ಪ್ರಮಾಣದ ಮಾದಕ ವಸ್ತುಗಳು ಲಭ್ಯವಾಗಿವೆ.
ಬೆಂಗಳೂರು (ಸೆ. 20): ರಾಗಿಣಿ ಆಪ್ತ ರವಿಶಂಕರ್ ಹೇಳಿಕೆ ಹಲವು ಪೆಡ್ಲರ್‌ಗಳಿಗೆ ಮುಳುವಾಗಿದೆ. ತನಿಖೆ ವೇಳೆ 'ಶ್ರೀ' ಎಂಬಾತನ ಬಗ್ಗೆ ಸುಳಿವು ಸಿಕ್ಕಿದ್ದು ಆತನ ಮನೆ ಮೇಲೆ ದಾಳಿ ಮಾಡಲಾಗಿದೆ. ಆತನ ಫ್ಲಾಟ್‌ನಲ್ಲಿ ಅಪಾರ ಪ್ರಮಾಣದ ಮಾದಕ ವಸ್ತುಗಳು ಲಭ್ಯವಾಗಿವೆ.
ಸುವರ್ಣ ನ್ಯೂಸ್ ವರದಿ ಪ್ರಸಾರವಾಗುತ್ತಿದ್ದಂತೆ ಗಾಂಜಾ ಡಾನ್ ಅರೆಸ್ಟ್!
11 ಎಕ್ಸ್‌ಟಸಿ ಮಾತ್ರೆಗಳು, 100 ಗ್ರಾಂಗೂ ಹೆಚ್ಚು ಗಾಂಜಾ, 1,1 ಗ್ರಾಂ ಎಂಡಿಎಂಎ, 0.5 ಗ್ರಾಂ ಹ್ಯಾಷಿಶ್ ಪತ್ತೆಯಾಗಿದೆ. ಶ್ರೀ ಎಂಬಾತ ಸಾದಹಳ್ಳಿ ಗೇಟ್ ಬಳಿ ರೆಸಾರ್ಟ್ ನಡೆಸುತ್ತಿದ್ದಾನೆ. ಈತ ಬೇರೆ ರೆಸಾರ್ಟ್‌ಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಈತನಿಗೂ ರಾಗಿಣಿಗೂ ನಂಟಿತ್ತು ಎನ್ನಲಾಗಿದೆ. ಈತನ ರೆಸಾರ್ಟ್‌ಗೆ ರಾಗಿಣಿ ಭೇಟಿ ನೀಡಿದ್ದರು ಎನ್ನಲಾಗಿದೆ. ಈಗ ಶ್ರೀ ಗೆ ಸಿಸಿಬಿ ಡ್ರಿಲ್ ಶುರುವಾಗಿದೆ. ಈತನಿಂದ ಇನ್ನಷ್ಟು ಪೆಡ್ಲರ್‌ಗಳ ಬಗ್ಗೆ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.