
Bengaluru: ತಡರಾತ್ರಿ ಪಿಸ್ತೂಲ್ ಹಿಡಿದು ಬೆದರಿಸಿ ಅಟ್ಟಹಾಸಗೈದ ಬಿಲ್ಡರ್..!
ಬೆಂಗಳೂರಿನ ಕೆ.ಆರ್. ಪುರಂನ ಚಿಕ್ಕಬಸವನಪುರದಲ್ಲಿ ಬಿಲ್ಡರ್ ಕಾರ್ತಿಕ್ ರೆಡ್ಡಿ ಅಂಡ್ ಗ್ಯಾಂ ದಾಂಧಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಸರ್ಕಾರಿ ಜಮೀನು ಮಾರಾಟಕ್ಕೆ ರೌಡಿಶೀಟರ್ ಮುಂದಾಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ದೂರುದಾರನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸರ್ಕಾರಿ ಜಮೀನು ಮಾರಾಟಕ್ಕೆ ಬಿಲ್ಡರ್ ಕಾರ್ತಿಕ್ ರೆಡ್ಡಿ ಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಬೆಂಗಳೂರಿನ ಕೆ.ಆರ್. ಪುರಂನ ಚಿಕ್ಕಬಸವನಪುರದಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 28 ರಂದು ಪಿಸ್ತೂಲ್ ಹಿಡಿದು ಬಿಲ್ಡರ್ ಅಟ್ಟಹಾಸಗೈದಿದ್ದಾರೆ ಎಂದು ಹೇಳಲಾಗಿದೆ. ಬಿಲ್ಡರ್ ಕಾರ್ತಿಕ್ ರೆಡ್ಡಿ ಅಂಡ್ ಗ್ಯಾಂ ದಾಂಧಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಮನೆ ಮುಂದಿದ್ದ ಕಾರಿಗೆ ಗುದ್ದಿ ಜಖಂಗೊಳಿಸಿ ಎಚ್ಚರಿಕೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ. ಈ ಹಿನ್ನೆಲೆ ಆರೋಪಿ ವಿರುದ್ಧ ಹಲವು ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.
Add Asianetnews Kannada as a Preferred Source
