Asianet Suvarna News Asianet Suvarna News

ಕೈಯಲ್ಲಿ ಲಾಂಗ್‌ ಹಿಡಿದು ಬೆಂಗಳೂರು ಹೈವೇಯಲ್ಲಿ ಪುಂಡರ ವ್ಹೀಲಿಂಗ್‌: ಪೊಲೀಸರೇ ಇದಕ್ಕೆ ಬ್ರೇಕ್‌ ಯಾವಾಗ?

ಲಗ್ಗೆರೆ ಮುಖ್ಯರಸ್ತೆಯಲ್ಲಿ ಲಾಂಗ್ ಹಿಡಿದು ಡಿಯೋ ಬೈಕ್ ನ ನಂಬರ್ ಪ್ಲೇಟ್ ತೆಗೆದು ಮುಖ ಚಹರೆ ಕಾಣಿಸದಂತೆ ಮಾಸ್ಕ್ ಧರಿಸಿಕೊಂಡು ಯುವಕರು ವ್ಹೀಲಿಂಗ್‌ ಮಾಡಿದ್ದಾರೆ.

ಬೆಂಗಳೂರು (ಮೇ.29): ಬೆಂಗಳೂರು ಹೈವೇಯಲ್ಲಿ ಪುಂಡರ ವ್ಹೀಲಿಂಗ್‌ ಮುಂದುವರೆದಿದೆ. ನಗರದ ಲಗ್ಗೆರೆ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಸಾಗುವ ಪ್ರಯಾಣಿಕರಿಗೆ ಇದರಿಂದ ಭಾರೀ ತೊಂದರೆಯಾಗಿದೆ. ಲಾಂಗ್ ಹಿಡಿದು ಡಿಯೋ ಬೈಕ್ ನ ನಂಬರ್ ಪ್ಲೇಟ್ ತೆಗೆದು ಮುಖ ಚಹರೆ ಕಾಣಿಸದಂತೆ ಮಾಸ್ಕ್ ಧರಿಸಿಕೊಂಡು ಈ ಕೃತ್ಯ ನಡೆಸಲಾಗಿದೆ. ಎಳೆ ಪ್ರಾಯದ ಯುವಕರ ಕೈನಲ್ಲಿ ಲಾಂಗ್ ಕೂಡ ಇದ್ದು, ಈ ದೃಶ್ಯಕ್ಕೆ ಸಾರ್ವಜನಿಕರು ಕೂಡ ಬೆಚ್ಚಿಬಿದ್ದಿದ್ದಾರೆ. ಮಾತ್ರವಲ್ಲ ಇದಕ್ಕೆಲ್ಲ ಮುಕ್ತಿ ಯಾವಾಗ ಎಂದು ಪೊಲೀಸರನ್ನು ಪ್ರಶ್ನಿಸುತ್ತಿದ್ದಾರೆ.