Asianet Suvarna News Asianet Suvarna News

ರೌಡಿಗಳ ವಿರುದ್ಧ ಪೊಲೀಸರು ಹೊಸ ಪ್ರಯೋಗ, ಕೈಗೆ ಕೋಳ ತೊಡಿಸಿ ಗಲ್ಲಿ ಮೆರವಣಿಗೆ

ರೌಡಿಗಳ ವಿರುದ್ಧ ಪೊಲೀಸರು ಹೊಸ ಪ್ರಯೋಗ ಶುರು ಮಾಡುತ್ತಿದ್ದಾರೆ. ಸಿನೆಮಾ ಸ್ಟೈಲ್ ನಲ್ಲೇ ರೌಡಿ ಶೀಟರ್ ಗಳಿಗೆ ಶಿಕ್ಷೆ ನೀಡಿದ್ದಾರೆ. ಜನರಿಗೆ ಬೆದರಿಕೆ ಹಾಕಿದ್ದ ಸ್ಥಳದಲ್ಲೇ ಆರೋಪಿಗಳಿಗೆ ಬೀದಿಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ.

ಬೆಂಗಳೂರು (ಡಿ.9): ರೌಡಿಗಳ ವಿರುದ್ಧ ಪೊಲೀಸರು ಹೊಸ ಪ್ರಯೋಗ ಶುರು ಮಾಡುತ್ತಿದ್ದಾರೆ. ಸಿನೆಮಾ ಸ್ಟೈಲ್ ನಲ್ಲೇ ರೌಡಿ ಶೀಟರ್ ಗಳಿಗೆ ಶಿಕ್ಷೆ ನೀಡಿದ್ದಾರೆ. ಜನರಿಗೆ ಬೆದರಿಕೆ ಹಾಕಿದ್ದ ಸ್ಥಳದಲ್ಲೇ ಆರೋಪಿಗಳಿಗೆ ಬೀದಿಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಕೈಗೆ ಕೋಳ ತೊಡಿಸಿ ಗಲ್ಲಿ ಗಲ್ಲಿಯಲ್ಲಿ ಮೆರವಣಿಗೆ ಮಾಡಿದ್ದು, ಈ ಮೂಲಕ ಜನರು ಭಯಪಡಬೇಕಾಗಿಲ್ಲ ಎಂಬ ಸಂದೇಶ ನೀಡಿದ್ದಾರೆ. 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ರೌಡಿ ಪಪ್ಪಾಯ ಸೋಹೆಲ್ ನನ್ನು ಗಲ್ಲಿ ಗಲ್ಲಿ ಮೆರವಣಿಗೆ ಮಾಡಿಸಿದ್ದು, ಈತ ಡ್ರಗ್ ಕೇಸ್ ನಲ್ಲೂ ಸಿಕ್ಕಿಬಿದ್ದಿದ್ದ.