Asianet Suvarna News Asianet Suvarna News

ಪೊಲೀಸರು ಇಟ್ಟುಕೊಂಡ ದಾಖಲೆ ಕಂಡು ಹೌಹಾರಿದ ಪೂಜಾರಿ

ಬೆಂಗಳೂರು ಪೊಲೀಸರ ವಶದಲ್ಲಿ ರವಿ ಪೂಜಾರಿ/ ಭೂಗತ ಪಾತಕಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ/ ಹಳೆಯ ಪ್ರಕರಣಗಳ ದಾಖಲೆ ಗುಡ್ಡೆ ಹಾಕಿಕೊಂಡಿರುವ ಪೊಲೀಸರು/ ಜೋಡಿ ಕೊಲೆ ಪ್ರಕರಣದ ವಿಚಾರಣೆ

ಬೆಂಗಳೂರು(ಫೆ. 25)  ಬೆಂಗಳೂರು ಪೊಲೀಸರ ವಶದಲ್ಲಿ ಇರುವ ರವಿ ಪೂಜಾರಿಗೆ ಸಿಸಿಬಿ ಪೊಲೀಸರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಒಂದಾದ ಮೇಲೆ ಒಂದು ಹಳೆ ಪ್ರಕರಣಗಳ ಫೈಲ್ ಗಳು ಹೊರಕ್ಕೆ ಬಂದಿವೆ. 

ಇದೇ ನೋಡಿ ರವಿ ಪೂಜಾರಿ ಹೆಡೆಮುರಿ ಕಟ್ಟಿದ ತಂಡ

ಜೋಡಿ ಕೊಲೆ, ಜಯನಗರದ ಬಿಲ್ಡರ್ ಕೊಲೆ ಸೇರಿದಂತೆ ಅನೇಕ ಪ್ರಕರಣಗಳ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಪೊಲೀಸರು ವಿಚಾರಣೆಗೆ ಸಕಲ ಸಜ್ಜಾಗಿದ್ದು ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಕುಳಿತಿದ್ದಾರೆ.