ಯುವಕನ ಜತೆ ಜುಂಬಾ ಡ್ಯಾನ್ಸರ್ ಪ್ರೇಮಗಾಥೆ, ಮದ್ವೆಗೆ ಸಿದ್ದವಾಗಿದ್ದ ಜೋಡಿ ಸಾವಿನ ಕದ ತಟ್ಟಿದ್ಯಾಕೆ?

ಆಕೆ ಜಿಮ್ ಟ್ರೈನರ್, ಈತ ನಿರುದ್ಯೋಗಿ ಯುವಕ.. ಅವಿವಾಹಿತನ ಜೊತೆ ಜುಂಬಾ ಡ್ಯಾನ್ಸರ್ ಪ್ರೇಮಗಾಥೆ… ಮದ್ವೆಗೆ ಸಿದ್ದವಾಗಿದ್ದ ಜೋಡಿ ಸಾವಿನ ಕದ ತಟ್ಟಿದ್ಯಾಕೆ..? ಇದೇ ಇವತ್ತಿನ ಎಫ್ ಐ ಆರ್ ...

Share this Video
  • FB
  • Linkdin
  • Whatsapp

ಬಳ್ಳಾರಿ, (ಆಗಸ್ಟ್.10): ಮಾಡಬಾರದು ಮಾಡಿದ್ರೇ, ಆಗಬಾರದು ಆಗುತ್ತದೆ ಎನ್ನುವ ಮಾತಿಗೆ ಈ ಎರಡು ಆತ್ಮಹತ್ಯೆಗಳೇ ಸಾಕ್ಷಿಯಾಗಿವೆ. ವಾರದ ಹಿಂದೆ ಗೃಹಿಣಿ ಮತ್ತು ಇಂದು ಯುವಕನೊಬ್ಬನ ಸಾವಿಗೆ ಅನೈತಿಕ ಪ್ರೇಮ ಸಂಬಂಧವೇ ಕಾರಣ ಎನ್ನುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಅವಳು ನೋಡೋಕೆ ಸುರಸುಂದರಿ. ಮೇಲಾಗಿ ವಿವಿಐಪಿಗಳಿಗೆ ಜಿಮ್ ಟ್ರೇನರ್ ಆಗಿದ್ದವಳು. ಮದುವೆಯಾಗಿ ಮುದ್ದಾದ ಮಗುವಿದ್ದಾಕೆ ಸಂಸಾರ ಮಾಡೋದನ್ನು ಬಿಟ್ಟು ಮತ್ತಿನೇನು ಮಾಡಲು ಹೋಗಿ ಮದುವೆಯ ನಂತರ ಮತ್ತೊಬ್ಬನ ಪ್ರೇಮಪಾಶಕ್ಕೆ ಒಳಗಾಗಿದ್ದಳು, ಮುಂದುವರೆದು ಪ್ರಿಯಕರನಿಗಾಗಿ ಗಂಡನಿಗೆ ವಿಚ್ಛೇದನ ನೀಡಿದ್ದಳು. ಪ್ರಿಯತಮನ ಮದುವೆಯಾಗುವ ಯೋಜನೆಯಲ್ಲಿದ್ದ ಆಕೆ ಈಗ ನೇಣಿಗೆ ಶರಣಾಗಿದ್ದಾಳೆ. 

ಪರಸಂಗ ಮಾಡಿ ಕೆಟ್ಟ ಗೃಹಿಣಿ: ನೇಣಿಗೆ ಶರಣಾದ ಝುಂಬಾ ಟ್ರೈನರ್, ಪ್ರಿಯಕರನೂ ಆತ್ಮಹತ್ಯೆ

ಆಕೆ ಜಿಮ್ ಟ್ರೈನರ್, ಈತ ನಿರುದ್ಯೋಗಿ ಯುವಕ.. ಅವಿವಾಹಿತನ ಜೊತೆ ಜುಂಬಾ ಡ್ಯಾನ್ಸರ್ ಪ್ರೇಮಗಾಥೆ… ಮದ್ವೆಗೆ ಸಿದ್ದವಾಗಿದ್ದ ಜೋಡಿ ಸಾವಿನ ಕದ ತಟ್ಟಿದ್ಯಾಕೆ..? ಇದೇ ಇವತ್ತಿನ ಎಫ್ ಐ ಆರ್ ...

Related Video