Asianet Suvarna News Asianet Suvarna News

ಕಂದನ ಮೇಲೆ ಬಿದ್ದ ಮರದ ರೆಂಬೆ: ಬಿಬಿಎಂಪಿ ನಿರ್ಲಕ್ಷ್ಯ, ಬಾಲಕಿ ಸ್ಥಿತಿ ಗಂಭೀರ!

ಬಿಬಿಎಂಪಿ ನಿರ್ಲಕ್ಷ್ಯಕ್ಕೆ 8 ವರ್ಷದ ಮಗು ಜೀವನ್ಮರಣದ ಮಧ್ಯೆ ಹೋರಾಟ| ರೆಂಬೆ ಬಿದ್ದು ಬಾಲಕಿಗೆ ತೀವ್ರ ರಕ್ತಸ್ರಾವ| ಬಿಬಿಎಂಪಿ ಗೆ ಸಾಕಷ್ಟು ದೂರು ನೀಡಿದ್ರು ಕ್ಯಾರೆ ಅಂದಿರ್ಲಿಲ್ಲ

First Published Mar 12, 2020, 8:30 AM IST | Last Updated Mar 12, 2020, 8:32 AM IST

ಬೆಂಗಳೂರು[ಮಾ.12]: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಾಲಕಿಯೊಬ್ಬಳು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ನಗರದ ರಾಮಮೂರ್ತಿನಗರದ ಕೌದಲಹಳ್ಳಿಯಲ್ಲಿ ನಡೆದಿದೆ.

ಕೌದಲಹಳ್ಳಿಯ ಆಂಜನೇಯ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ 8.30ರ ಸುಮಾರಿಗೆ ಬಾಲಕಿ ರೆಚಲ್ ತ್ರಿಷಾಳನ್ನು ಅವಳ ತಂದೆ ರಾಜು ಎಂಬುವವರು ಬೆಳಗ್ಗೆ ಶಾಲೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ರೆಂಬೆ ಬಿದ್ದು ಬಾಲಕಿಗೆ ತೀವ್ರ ರಕ್ತಸ್ರಾವವಾಗಿದೆ.

ತಕ್ಷಣವೇ ಆಕೆಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.