Asianet Suvarna News Asianet Suvarna News

ಬೆಂಗಳೂರಿನಲ್ಲಿ 'ಪಿಎಫ್‌ಐ ಮುಖಂಡ'ನನ್ನು ಬಂಧಿಸಿದ ಅಸ್ಸಾಂ ಪೊಲೀಸರು

ಮಂಗಳೂರಿಲ್ಲಿ ಕುಕ್ಕರ್‌ ಬ್ಲಾಸ್ಟ್‌ ಆದ್ಮೇಲೆ ಬೆಂಗಳೂರಿನಲ್ಲಿ ಆತಂಕ ಶುರುವಾಗಿದ್ದು, ಸಿಲಿಕಾನ್ ಸಿಟಿ ಉಗ್ರರಿಗೆ ಸ್ಲೀಪರ್‌ ಸೆಲ್‌ ಆಗಿದೆಯಾ ಎಂಬ ಅನುಮಾನ ಮೂಡಿದೆ.
 

ಬೆಂಗಳೂರು(ನ.24):ಬೆಂಗಳೂರಿನಲ್ಲಿ ನಿಷೇಧಿತ PFI ಸ್ಟೂಡೆಂಟ್‌ ವಿಂಗ್‌ನ ಅಧ್ಯಕ್ಷ  ಅಮೇರ್‌ ಹಂಝಾ ಎಂಬಾತನನ್ನು ಬಂಧಿಸಲಾಗಿದೆ. ಉಗ್ರರಿಗೆ ಬೆಂಗಳೂರು ಸುರಕ್ಷಿತ ತಾಣವಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ. ಸ್ವಲ್ಪ ಯಾಮಾರಿದ್ರೆ ಅನಾಹುತ ನಡೆಯುತಿತ್ತೊ ಏನೋ ಗೊತ್ತಿಲ್ಲ. ಈ ಅಮೇರ್ PFI ಉಪ ಸಂಘಟನೆ CFI ನ ಅಧ್ಯಕ್ಷ ಕೂಡ ಆಗಿದ್ದ. PFI ಬ್ಯಾನ್‌ ಆದ್ಮೇಲೆ ಅಸ್ಸಾಂನಿಂದ ಬೆಂಗಳೂರಿಗೆ ಬಂದಿದ್ದ  ಅಮೇರ್‌, ಹೆಣ್ಣೂರಿನ ಸಾರಾಯಿಪಾಳ್ಯದಲ್ಲಿ ನೆಲೆಸಿದ್ದ.  ಪಾಸ್‌ ಪೋರ್ಟ್‌ಗೆ ಅಪ್ಲಾಯ್ ಮಾಡಿ ವಿದೇಶಕ್ಕೆ ತೆರಳುವ ಸ್ಕೆಚ್‌ ಹಾಕಿದ್ದ. ಬಿನ್ಯಾಮಿನ ಅನ್ನುವ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ವಿದೇಶಕ್ಕೆ ತೆರಳುವ ಪ್ಲಾನ್ ಮಾಡಿದ್ದ. ಆದರೆ ಪಾಸ್‌ ಪೋರ್ಟ್‌ ಸಿಗುವ ಮುನ್ನವೇ ಗುಹವಾಟಿ ಪೊಲೀಸರು ಅಮೇರ್‌ ಹಂಝಾನನ್ನು ಬಂಧಿಸಿದ್ದಾರೆ.

ಸಿದ್ದು ಎದುರು ಬೀಳಗಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಶಕ್ತಿ ಪ್ರದರ್ಶನ

Video Top Stories