Suvarna FIR : ಸಾಲ, ಅಕ್ರಮ ಸಂಬಂಧ, ಕೊಣನೂರು ಲಾಡ್ಜ್ ನಲ್ಲಿ ಸಿಕ್ತು ಮೃತದೇಹ

ಲಾಡ್ಜ್ ನಲ್ಲಿಯೇ ನಡೆಯಿತು ವ್ಯಕ್ತಿಯ ಹತ್ಯೆ
ತಾನೇ ಕೊಲೆ ಮಾಡಿದ್ದೇನೆ ಎಂದು ಪೊಲೀಸ್ ಠಾಣೆಗೆ ಬಂದ ವ್ಯಕ್ತಿ
ಲಕ್ಷ್ಮಣ್, ಹರೀಶನನ್ನು ಕೊಲೆ ಮಾಡಿದ್ದು ಯಾಕೆ?

Share this Video
  • FB
  • Linkdin
  • Whatsapp

ಹಾಸನ (ಜ. 21): ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಸ್ನೇಹಿತರಿಂದಲೇ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಪಟ್ಟಣದ ಲಾಡ್ಜ್ ನಲ್ಲಿ ನಡೆದಿದೆ. ಕೊಣನೂರು ಸಮೀಪದ ಬಿಎಸ್ ಇ ಲಾಡ್ಜ್ ನಲ್ಲಿ ರೂಂ ಮಾಡಿ ಹರೀಶನನ್ನು ಕರೆಸಿ ಬಾತ್ ರೂಂನಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮದ ನಿವಾಸಿ ಹರೀಶನನ್ನು ಲಕ್ಷ್ಮಣ, ದಿಲೀಪ್, ಸುಶ್ಮಿತಾ ಎಂಬುವವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ನಡುವೆ ಲಕ್ಷ್ಮಣ್ ತಾನೊಬ್ಬನೇ ಕೊಲೆ ಮಾಡಿರುವುದಾಗಿ ಕೊಣನೂರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

Suvarna FIR : ಕಲಬುರಗಿ, ಆಕೆಯ ಮನೆ ಹತ್ತಿರ ಕಾಣಿಸಿಕೊಂಡಿದ್ದೇ ತಪ್ಪಾಯ್ತು... ಹೊಟ್ಟೆಗೆ ಚಾಕು ಇಳಿಸಿದರು!
ಸುಶ್ಮಿತಾ ಹಾಗೂ ಹರೀಶ್ ತಾವಿಬ್ಬರೂ ಗಂಡ ಹೆಂಡತಿ ಎಂದು ರೂಮ್ ಬುಕ್ ಮಾಡಿದ್ದರು. ಲಕ್ಷ್ಮಣ್ ಹಾಗೂ ದಿಲೀಪ್ ಮತ್ತೊಂದು ರೂಮ್ ತೆಗೆದುಕೊಂಡಿದ್ದರು. ದಿಲೀಪ್ ಹಾಗೂ ಸುಶ್ಮಿತಾ ಎಸ್ಕೇಪ್ ಆಗಿರುವುದರ ಹಿಂದಿನ ರಹಸ್ಯ ಕುತೂಹಲಕಾರಿಯಾಗಿದೆ. ಕುತೂಹಲಕಾರಿ ಮರ್ಡರ್ ನ ಕಂಪ್ಲೀಟ್ ಕಹಾನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video