Suvarna FIR; ತೆಲಗಿ ತೊಲಗಿದ್ದರೂ ನಿಂತಿಲ್ಲ ನಕಲಿ, ಸಾಮ್ರಾಜ್ಯ ಕಂಡು ಬೆಚ್ಚಿಬಿದ್ದ ಪೊಲೀಸರು!

* ಬೆಂಗಳೂರು ಪೊಲೀಸರ ಭರ್ಜರಿ ಬೇಟೆ
* ನಕಲಿ ಸ್ಟಾಂಪ್ ಪೇಪರ್ ಹಗರಣ
* ವರ್ಷದ ನಂತರ ಸಿಕ್ಕಿಬಿದ್ದ ಖತರ್‌ ನಾಕ್ ಆರೋಪಿಗಳು
*ನಿಷೇಧ ಪೂರ್ವದ ಛಾಪಾ ಕಾಗದದ ನಕಲಿ ಪ್ರತಿ ಮಾರಾಟ ಜಾಲ ಬೆಳಕಿಗೆ

First Published Nov 20, 2021, 3:47 PM IST | Last Updated Nov 20, 2021, 3:47 PM IST

ಬೆಂಗಳೂರು(ನ. 20)   ಬೆಂಗಳೂರು ಪೊಲೀಸರ (Bengaluru Police) ಭರ್ಜರಿ ಬೇಟೆ. ಖುದ್ದು ಕಂದಾಯ ಅಧಿಕಾರಿಗಳೆ ನಂಬುವಂತೆ ನಕಲಿ ಛಾಪಾ ಕಾಗದ (Fake Stamp Paper RacketZ) ಸಿದ್ಧಮಾಡುತ್ತಿದ್ದ ತಂಡ  ಸಿಕ್ಕಿಬಿದ್ದಿದೆ. ಸುಮಾರು ಒಂದು ವರ್ಷದ ಹಿಂದೆ ಖ್ಯಾತ ರಾಜಕಾರಣಿಯ ಮಕ್ಕಳು ನಕಲಿ ಛಾಪಾ ಕಾಗದದಿಂದ ಸಾಕಷ್ಟು ದುಡ್ಡು ಮಾಡಿಕೊಂಡಿದ್ದಾರೆ ಎನ್ನುವ ವರದಿ ಬಂದಿತ್ತು.

ಜ್ಯೂನಿಯರ್‌ ಕರೀಂಲಾಲಾ ತೆಲಗಿ ಬಂಧನ: ಕೋಟ್ಯಂತರ ರೂ. ಆಸ್ತಿ ಕಬಳಿಕೆ?

ಇದಾದ ನಂತರ ಪೊಲೀಸ್ ಇಲಾಖೆ ವಿಶೇಷ ತಂಡವೊಂದನ್ನು ರಚನೆ ಮಾಡಿತ್ತು. ಒಂದು ವರ್ಷದ  ನಂತರ ಸಿಕ್ಕಿದ್ದು ಬೇರೆಯದೇ ಗ್ಯಾಂಗ್. ಬೆಂಗಳೂರು ಪೂರ್ವ ವಲಯದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಅಸಲಿಗೂ ಮತ್ತು ನಕಲಿಗೂ ವ್ಯತ್ಯಾಸ ಗೊತ್ತಾಗದಂತೆ ಸ್ಟಾಂಪ್ ಪೇಪರ್ ಸಿದ್ಧಮಾಡಲಾಗುತ್ತಿತ್ತು.