ರಾಯಚೂರಿನಲ್ಲಿ ಭೀಕರ ಅಪಘಾತ: ಕಾರ್-ಬೈಕ್‌ ಮಧ್ಯೆ ಡಿಕ್ಕಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ರಾಯಚೂರಿನ ಸಿರಿವಾರ ಪಟ್ಟಣದಲ್ಲಿ ಭೀಕರವಾಗಿ ರಸ್ತೆ ಅಪಘಾತ ನಡೆದ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ವೈರಲ್‌ ಆಗುತ್ತಿದೆ.

First Published May 24, 2023, 7:55 PM IST | Last Updated May 24, 2023, 7:55 PM IST

ರಾಯಚೂರು (ಮೇ 24): ರಾಯಚೂರಿನಲ್ಲಿ ಭೀಕರವಾಗಿ ರಸ್ತೆ ಅಪಘಾತ ನಡೆದ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ದೇಶಾದ್ಯಂತ ವೈರಲ್‌ ಆಗುತ್ತಿದೆ. ಈ ಘಟನೆಯಲ್ಲಿ ಬೈಕ್‌ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ರಾಯಚೂರು ಜಿಲ್ಲೆಯ ಸಿರಿವಾರ ಪಟ್ಟಣದ ಹೊರ ವಲಯದಲ್ಲಿ ನಡೆದಿರುವ ಅಪಘಾತದಲ್ಲಿ ಫಾರ್ಚೂನರ್ ಕಾರು ಮತ್ತು ಬೈಕ್‌ಗಳ ಮಧ್ಯೆ ಡಿಕ್ಕಿಯಾಗಿದೆ. ಅಪಘಾತದ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿರವಾರ ಪಟ್ಟಣ ಹೊರವಲಯದಲ್ಲಿ ಘಟನೆ ನಡೆದಿದ್ದುಮ 3 ಬೈಕ್ ಮತ್ತು 1 ಟಾಟಾ ಎಸಿ (ಗೂಡ್ಸ್‌ ಆಟೋ) ಗಾಡಿಗೆ ಡಿಕ್ಕಿ ಹೊಡೆದಿದೆ. ಒಬ್ಬ ಬೈಕ್‌ ಸವಾರ ಸಾವನ್ನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 

ಭೀಕರ ಅಪಘಾತ ನಡೆದ ಕೂಡಲೇ ಜನರು ಹಲ್ಲೆ ಮಾಡುವ ಭಯದಿಂದ ಕಾರಿನ ಚಾಲಕ ಘಟನೆ ನಡೆದ ಸ್ಥಳದಲ್ಲಿಯೇ ಕಾರನ್ನು ಬಿಟ್ಟು ಪರಾರಿ ಆಗಿದ್ದಾರೆ. ಸದ್ಯ ಎಲ್ಲೆಡೆ ಭೀಕರ ಆಕ್ಸಿಡೆಂಟ್ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಘಟನೆ ಕುರಿತಂತೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.