ಚಳಿಗಾಲ, ಆಸ್ತಮಾ ಇದೆ ಜಾಮೀನು ಕೊಡಿ ಎಂದ ಸಂಜನಾಗೆ ಸಿಕ್ಕ ಉತ್ತರ!
ಸುಪ್ರೀಂನಲ್ಲಿಯೂ ರಾಗಿಣಿ ಜಾಮೀನು ಅರ್ಜಿ ಮುಂದಕ್ಕೆ/ ಇತ್ತ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ಸಂಜನಾ/ ಆದೇಶ ಕಾಯ್ದಿರಿಸಿದ ನ್ಯಾಯಾಲಯ / ಅನಾರೋಗ್ಯದ ಕಾರಣ ನಟಿ ಜಾಮೀನು ಕೇಳಿದ್ದರು
ಬೆಂಗಳೂರು ( ಡಿ. 04) ಒಂದು ಕಡೆ ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದ ರಾಗಿಣಿಗೆ ನಿರಾಸೆಯಾಗಿದ್ದರೆ ಇನ್ನೊಂದು ಕಡೆ ಅನಾರೋಗ್ಯದ ಕಾರಣ ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಚಳಿಗಾಲದಲ್ಲಿ ಸಂಜನಾಗೆ ಆಸ್ತಮಾ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಚಿಕಿತ್ಸೆಗಾಗಿ ಜಾಮೀನು ನೀಡಿ ಎಂದು ಸಂಜನಾ ಪರ ವಾದ ಮುಂದಿಡಲಾಗಿದೆ. ಆದೇಶವನ್ನು ಕೋರ್ಟ್ ಡಿಸೆಂಬರ್ 7 ಕ್ಕೆ ಕಾಯ್ದಿರಿಸಿದೆ.