ಬೆಳಗಾವಿ ಅಪಘಾತ: ಮಗನನ್ನು ಕಳೆದುಕೊಂಡಿದ್ದೀನ್ರಿ, ಅಣ್ಣನ ಮಕ್ಕಳು ಅನಾಥರಾದ್ರು, ಕುಟುಂಬಸ್ಥರ ಆಕ್ರಂದನ

ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನವೊಂದು ನಾಲೆಗೆ ಬಿದ್ದ ಪರಿಣಾಮ 7 ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಕಲ್ಯಾಳ್‌ಪೂಲ್‌ ಬಳಿ ನಡೆದಿದೆ. 
 

First Published Jun 26, 2022, 4:58 PM IST | Last Updated Jun 26, 2022, 4:58 PM IST

ಬೆಳಗಾವಿ (ಜೂ. 26): ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನವೊಂದು ನಾಲೆಗೆ ಬಿದ್ದ ಪರಿಣಾಮ 7 ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಕಲ್ಯಾಳ್‌ಪೂಲ್‌ ಬಳಿ ನಡೆದಿದೆ.  ಕ್ರೂಸರ್‌ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ 7 ಮಂದಿ ಮೃತಪಟ್ಟಿದ್ದಾರೆ. ಮೃತರನ್ನ ಜಿಲ್ಲೆ ಗೋಕಾಕ್‌ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದವರು ಅಂತ ತಿಳಿದು ಬಂದಿದೆ. 

ಬೆಳಗಾವಿ ಬಳಿ ಭೀಕರ ಅಪಘಾತ: ಕೂಲಿ ಕೆಲಸಕ್ಕೆ ತೆರಳುತ್ತಿದ್ದ 7 ಕಾರ್ಮಿಕರ ದುರ್ಮರಣ

'ಮೂರು ದಿನಗಳಿಂದ ನಮ್ಮ ಮಗ ಕೆಲಸಕ್ಕೆ ಹೋಗುತ್ತಿದ್ದ, ಈಗ ನೋಡಿದರೆ ಅಪಘಾತವಾಗಿದೆ ಎಂದು ಕರೆ ಬಂದಿದೆ, ನನ್ನ ಅಣ್ಣನ 3 ಪುಟ್ಟ ಪುಟ್ಟ ಮಕ್ಕಳು ಅನಾಥರಾದವು... ಏನ್ ಮಾಡೋದು ಸ್ವಾಮಿ...' ಎಂದು ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ. 

Video Top Stories