
ಬೀದರ್ ಎಟಿಎಂ ದರೋಡೆಗೆ 3 ತಿಂಗಳು: ದರೋಡೆಕೋರರು ಪತ್ತೆಯಾಗಿಲ್ಲ, ಗಾಯಾಳುಗೆ ಪರಿಹಾರವೂ ಸಿಕ್ಕಿಲ್ಲ!
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಬೀದರ್ ಎಟಿಎಂ ದರೋಡೆಗೆ 3 ತಿಂಗಳುಗಳು ಕಳೆದಿವೆ. ಆದರೆ ಪೊಲೀಸರು ದರೋಡೆಕೋರರನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ. ಇನ್ನೊಂದು ಕಡೆ ಘಟನೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತನಿಗೂ ಯಾವುದೇ ಪರಿಹಾರವೂ ಸಿಕ್ಕಿಲ್ಲ.
ಬೀದರ್ (ಏ.16): ಎಟಿಎಂ ವಾಹನದಿಂದ ಹಣ ದರೋಡೆ ಮಾಡಿ, ಒಬ್ಬ ಸಿಬ್ಬಂದಿಯನ್ನು ಕೊಂದು ಪರಾರಿಯಾದ ಘಟನೆ ಬೀದರ್‌ನಲ್ಲಿ ಸಂಭವಿಸಿ 3 ತಿಂಗಳಾದರೂ ದರೋಡೆಕೋರರ ಪತ್ತೆಯಾಗಿಲ್ಲ. ಗಾಯಾಳುಗೆ ಪರಿಹಾರವೂ ಸಿಕ್ಕಿಲ್ಲ. ಹೌದು! ಬೀದರ್ ದರೋಡೆ ಪ್ರಕರಣದ ಆರೋಪಿಗಳ ಸುಳಿವು ಕೊಟ್ಟವರಿಗೆ ರಾಜ್ಯ ಪೊಲೀಸ್ ಇಲಾಖೆಯಿಂದ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಈ ಹಿಂದೆ ಘೋಷಣೆ ಮಾಡಲಾಗಿತ್ತು. ಬೀದರ್ ನಗರದಲ್ಲಿ ಜ.16ರಂದು ಹಾಡುಹಗಲೆ ನಡು ರಸ್ತೆಯಲ್ಲಿಯೇ ಗುಂಡಿನ ದಾಳಿ ನಡೆಸಿ ಒಬ್ಬರನ್ನು ಕೊಲೆ ಮಾಡಿ 93 ಲಕ್ಷ ರೂ. ನಗದು ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಕೃತ್ಯ ಎಸಗಿದ ಹಂತಕರು ಬಿಹಾರ ಮೂಲದವರು ಎಂದು ಪೊಲೀಸ್ ಇಲಾಖೆ ಖಚಿತಪಡಿಸಿತ್ತು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.