
ಬೆಂಗಳೂರಿನಲ್ಲಿ ಮತ್ತೊಂದು ದುರಂತ:ತೆರೆದ ಚರಂಡಿಗೆ ಯುವತಿ ಬಲಿ!
ಮೊನ್ನೇ ಅಷ್ಟೇ ಹುಡಗಿಯೊರ್ವಳು ಆಯಾತಪ್ಪಿ ಲೈಟ್ ಕಂಬ ಹಿಡಿದಿದ್ದಕ್ಕೆ ಸಾವನ್ನಪ್ಪಿದ್ದಳು. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ತೆರೆದ ಚರಂಡಿಗೆ ಬಿದ್ದು ಯುವತಿ ಬಲಿಯಾಗಿದ್ದಾಳೆ.
ಬೆಂಗಳೂರು, (ಸೆಪ್ಟೆಂಬರ್.11): ಸ್ಕೂಟಿಯಿಂದ ಆಯತಪ್ಪಿ ಚರಂಡಿಗೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಚ್ಬಿಆರ್ ಲೇಔಟ್‌ನ ಅಶ್ವತ್ಥ್ ನಗರದಲ್ಲಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತಾರಾ ಬಡಾಯಿಕ್(23) ಮೃತ ಯುವತಿ. ತಡರಾತ್ರಿ ಸ್ಕೂಟರ್‌ನಿಂದ ತೆರಳುತ್ತಿದ್ದಾಗ ೀ ದುರ್ಘಟನೆ ನಡೆದಿದೆ. ಡ್ರೈನೇಜ್ ತೆರೆದಿದ್ದ ಕಾರಣ ನೇರವಾಗಿ ಡ್ರೈನೇಜ್‌ಗೆ ಬಿದ್ದಿದ್ದಾರೆ. ಬಳಿಕ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.