Asianet Suvarna News Asianet Suvarna News

ಆಸೀಸ್ ಮಣಿಸಿದ ಪೂನಂ ಹಿಂದಿದೆ ಒಂದು ಸ್ಪೂರ್ತಿಯ ಸ್ಟೋರಿ..!

ಗಾಯದ ಸಮಸ್ಯೆಯಿಂದಾಗಿ ಈ ವರ್ಷದಲ್ಲಿ ಒಂದೂ ಪಂದ್ಯವಾಡದ ಪೂನಂ, ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲೇ ಅಮೋಘ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪೂನಂ ಯಾದವ್ ಬಗೆಗಿನ ಸ್ಫೂರ್ತಿಯ ಸ್ಟೋರಿ ಇಲ್ಲಿದೆ ನೋಡಿ..

ಸಿಡ್ನಿ(ಫೆ.23): ಸಾಧಿಸುವ ಛಲವೊಂದಿದ್ದರೆ, ಎಂತಹ ಸವಾಲನ್ನು ಬೇಕಾದರೂ ಮೆಟ್ಟಿ ನಿಲ್ಲಬಹುದು ಎನ್ನುವುದಕ್ಕೆ ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಪೂನಂ ಯಾದವ್ ಸದ್ಯದ ಉದಾಹರಣೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ ರೋಚಕವಾಗಿ ಮಣಿಸಿತ್ತು. ಈ ಪಂದ್ಯದ ಗೆಲುವಿನ ಹೀರೋಯಿನ್ ಪೂನಂ ಯಾದವ್.

ಹೌದು, ಗಾಯದ ಸಮಸ್ಯೆಯಿಂದಾಗಿ ಈ ವರ್ಷದಲ್ಲಿ ಒಂದೂ ಪಂದ್ಯವಾಡದ ಪೂನಂ, ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲೇ ಅಮೋಘ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪೂನಂ ಯಾದವ್ ಬಗೆಗಿನ ಸ್ಫೂರ್ತಿಯ ಸ್ಟೋರಿ ಇಲ್ಲಿದೆ ನೋಡಿ..