ಟೀಂ ಇಂಡಿಯಾಗೆ ಸಿಕ್ತು ಕೈಫ್-ಯುವಿ ಹೋಲುವ ಕಿಲಾಡಿ ಜೋಡಿ..!

2002 ನಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯವನ್ನು ಯಾರಾದರೂ ಮರೆಯಲು ಸಾಧ್ಯವೇ..? ಯುವಿ ಹಾಗೂ ಕೈಫ್ ಕೆಚ್ಚೆದೆಯ ಹೋರಾಟಕ್ಕೆ ಆಂಗ್ಲರು ತಲೆಬಾಗಿದ್ದರು. ಯುವಿ-ಕೈಫ್ ಜೋಡಿ ಭಾರತಕ್ಕೆ ಈ ರೀತಿ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದಿತ್ತಿದ್ದಾರೆ.

Share this Video
  • FB
  • Linkdin
  • Whatsapp

ಆಕ್ಲೆಂಡ್(ಜ.25): ಟೀಂ ಇಂಡಿಯಾ ಪಾಲಿಗೆ ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್ ಜೋಡಿ ದಿ ಬೆಸ್ಟ್ ಮ್ಯಾಚ್ ಫಿನೀಶರ್ ಆಗಿ ಗುರುತಿಸಿಕೊಂಡಿದ್ದರು. ಇವರಿಬ್ಬರು ಕ್ರೀಸ್‌ನಲ್ಲಿದ್ದಾರೆ ಎಂದರೆ ಭಾರತೀಯ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ಸಿಗುತ್ತಿತ್ತು.

ಅದರಲ್ಲೂ 2002 ನಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯವನ್ನು ಯಾರಾದರೂ ಮರೆಯಲು ಸಾಧ್ಯವೇ..? ಯುವಿ ಹಾಗೂ ಕೈಫ್ ಕೆಚ್ಚೆದೆಯ ಹೋರಾಟಕ್ಕೆ ಆಂಗ್ಲರು ತಲೆಬಾಗಿದ್ದರು. ಯುವಿ-ಕೈಫ್ ಜೋಡಿ ಭಾರತಕ್ಕೆ ಈ ರೀತಿ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದಿತ್ತಿದ್ದಾರೆ.

ಆದರೆ ಯುವಿ-ಕೈಫ್ ವಿದಾಯದ ಬಳಿಕ ಈ ರೀತಿಯ ಮತ್ತೊಂದು ಮ್ಯಾಚ್ ಫಿನೀಶಿಂಗ್ ಜೋಡಿ ಸಿಕ್ಕಿರಲಿಲ್ಲ. ಆದರೆ ಇದೀಗ ಅಂತಹದ್ದೇ ಒಂದು ಕಿಲಾಡಿ ಜೋಡಿ ಟೀಂ ಇಂಡಿಯಾಗೆ ಸಿಕ್ಕಿದೆ. ಆ ಜೋಡಿಯಲ್ಲಿ ಕನ್ನಡಿಗನೂ ಸ್ಥಾನ ಪಡೆದಿದ್ದಾನೆ ಎನ್ನೋದು ಮತ್ತೊಂದು ವಿಶೇಷ. ಅಷ್ಟಕ್ಕೂ ಆ ಕಿಲಾಡಿ ಜೋಡಿ ಯಾವುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

Related Video