Asianet Suvarna News Asianet Suvarna News

1000 ಶಿಕ್ಷಕರು, ಲಕ್ಷ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿದ ಎಂ ಎಸ್ ಧೋನಿ

ಧೋನಿಯಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ತಾಂತ್ರಿಕ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಉದ್ಘಾಟನೆ
ಬೆಂಗಳೂರಿನ ಕೂಡ್ಲು ಬಳಿ ಇರುವ ಎಂ ಎಸ್ ಧೋನಿ ಗ್ಲೋಬಲ್ ಸ್ಕೂಲ್
ಸಾವಿರ ಶಿಕ್ಷಕರು ಮತ್ತು ಲಕ್ಷ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿ ಗುರಿ

Oct 10, 2022, 5:19 PM IST

ಬೆಂಗಳೂರು(ಅ.10): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಇಂದು ಇಲ್ಲಿನ ಕೂಡ್ಲು ಗೇಟ್‌ ಬಳಿ ಇರುವ ಎಂ ಎಸ್ ಧೋನಿ ಗ್ಲೋಬಲ್‌ ಸ್ಕೂಲ್‌ಗೆ ಭೇಟಿ ನೀಡಿ, ಶಿಕ್ಷಕರು ಹಾಗೂ ಪೋಷಕರ ಜತೆ ಸಮಾಲೋಚನೆ ನಡೆಸಿದ್ದಾರೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ತಾಂತ್ರಿಕ ತರಬೇತಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಧೋನಿ, ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಮೈಕ್ರೊಸಾಫ್ಟ್‌ನ ಟೆಕ್ ಅವಂತ್ ಗಾರ್ಡೆ ಸಹಯೋಗದಲ್ಲಿ ಡಿಜಿಟಲ್ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧೋನಿ, ಸಾವಿರ ಶಿಕ್ಷಕರು ಮತ್ತು ಲಕ್ಷ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿ ಗುರಿ ಹೊಂದಿದ್ದಾರೆ. ಇದರ ಒಂದು ಝಲಕ್ ಇಲ್ಲಿದೆ ನೋಡಿ