ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಚೀನಾ, ಇಟಲಿ ಮೀರಿಸಿದ ಅಮೆರಿಕ!

ಕೊರೋನಾ ವೈರಸ್ ಆತಂಕ, ಸೋಂಕಿತರ ಸಂಖ್ಯೆಯಲ್ಲಿ ಇಟಲಿ, ಚೀನಾ ಮೀರಿಸಿದ ಅಮೆರಿಕಾ| ದಿನೇ ದಿನೇ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ

First Published Mar 28, 2020, 5:02 PM IST | Last Updated Mar 28, 2020, 5:08 PM IST

ನ್ಯೂಯಾರ್ಕ್(ಮಾ.28) ಕೊರೋನಾ ಅಟ್ಟಾಸ ದಿನೇ ದಿನೇ ಮಿತಿ ಮೀರುತ್ತಿದ್ದು, ಸದ್ಯ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನು ಬೆಂಬಿಡದೆ ಕಾಡುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾವು, ಚೀನಾ ಹಾಗೂ ಇಟಲಿಯನ್ನೇ ಮೀರಿಸಿದೆ.

ಹೌದು ಅಮೆರಿಕಾದಲ್ಲಿ ಜಗತ್ತಿನ ಅತಿ ಹೆಚ್ಚು ಸೋಂಕಿತರಿದ್ದಾರೆ. ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದ್ದು, ಶುಕ್ರವಾರ ಒಂದೇ ದಿನ ಹತ್ತೊಂಬತ್ತು ಪ್ರಕರಣಗಳು ವರದಿಯಾಗಿವೆ.

ಸಾವಿನ ಸಂಖ್ಯೆಯೂ ದಿನ ದಿನೇ ಹೆಚ್ಚುತ್ತಿದ್ದು, ಒಂದು ಸಾವಿರದ ಏಳ್ನೂರು ಮಂದಿ ಸಾವನ್ನಪ್ಪಿದ್ದಾರೆ.