ಕೊರೋನಾ ಕಂಟ್ರೋಲ್ ಹೇಗೆ ಮಾಡ್ಬೇಕು? ಕಲಬುರಗಿ ಡಿಸಿ ನೋಡಿ ಕಲಿತುಕೊಳ್ಳಿ
ಕಲಬುರಗಿ ಡಿಸಿ ಮಾಡಿದ ಮ್ಯಾಜಿಕ್/ ಮೊದಲ ಕೊರೋನಾ ಸಾವು ದಾಖಲಾಗಿದ್ದು ಕಲಬುರಗಿಯಲ್ಲೇ/ ಕಳೆದ ಹನ್ನೆರಡು ದಿನಗಳಿಂದ ಒಂದು ಪಾಸಿಟಿವ್ ಕೇಸ್ ಇಲ್ಲ/ ಆತಂಕದ ನಡುವೆಯೂ ಒಂದು ಒಳ್ಳೆಯ ಬೆಳವಣಿಗೆ
ಕಲಬುರಗಿ(ಮಾ. 29) ಕರ್ನಾಟಕದಲ್ಲಿ ಮೊದಲ ಕೊರೋನಾ ಸಾವು ಸಂಭವಿಸಿದ್ದು ಕಲಬುರಗಿ ಜಿಲ್ಲೆಯಲ್ಲಿ. ಇದಾದ ತಕ್ಷಣವೇ ಅಪಾಯದ ಎಚ್ಚರಿಕೆ ಅರಿತ ಅಲ್ಲಿನ ಡಿಸಿ ಶರತ್ ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡರು.
ಕಲಬುರಿ ಡಿಸಿ ಶರತ್ ಏಳು ಸುತ್ತಿನ ಕೋಟೆ ನಿರ್ಮಾಣ ಮಾಡಿದರು. ರಾಜ್ಯಗಳ ಗಡಿ ಬಂದ್ ಮಾಡಿದರು. ಖಾಸಗಿ ವಾಹನ ಓಡಾಡಕ್ಕೆ ನಿರ್ಬಂಧ ಹೇರಿದರು. ವಿದೇಶದಿಂದ ಬಂದವರಿಗೆ ಮನೆಯಲ್ಲೇ ವಾಸ ಕಡ್ಡಾಯ ಮಾಡಿದರು. ಇದೆಲ್ಲದರ ಪರಿಣಾಮ ಎಂಬಂತೆ ಕಳೆದ ಹನ್ನೆರಡು ದಿನಗಳಿಂದ ಒಂದೇ ಒಂದು ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಒಟ್ಟಿನಲ್ಲಿ ಇಷ್ಟೆಲ್ಲಾ ಆತಂಕದ ನಡುವೆಯೂ ಕಲಬುರಗಿ ಜಿಲ್ಲಾಧಿಕಾರಿ ಕಾರ್ಯವೈಖರಿಗೆ ಒಂದು ಮೆಚ್ಚುಗೆ ನೀಡಲೇಬೇಕು.