‘ಕೊರೋನಾ ಶಂಕಿತರೇ ಹುಷಾರ್: ಹೊರಗಡೆ ಓಡಾಡಿದ್ರೆ ಪೊಲೀಸರು ಅರೆಸ್ಟ್ ಮಾಡ್ತಾರೆ’
ಕ್ವಾರಂಟೈನ್ ಮುದ್ರೆ ಇದ್ದವರು ಹೊರಗಡೆ ಓಡಾಡಿದರೆ ಬಂಧನ| ಈ ಬಗ್ಗೆ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್|ಕ್ವಾರಂಟೈನ್ ಮುದ್ರೆ ಇದ್ದವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ|
ಬೆಂಗಳೂರು[ಮಾ.23]: ಕ್ವಾರಂಟೈನ್ ಮುದ್ರೆ ಇದ್ದವರು ಹೊರಗಡೆ ಓಡಾಡಿದರೆ ಬಂಧಿಸುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ಕ್ವಾರಂಟೈನ್ ಮುದ್ರೆ ಇದ್ದವರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಕ್ವಾರಂಟೈನ್ ಮುದ್ರೆ ಹಾಕಿಸಿಕೊಂಡವರು ಹೊರಗಡೆ ಓಡಾಡುವುವರನ್ನ ಕಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ 100 ನಂಬರ್ ಗೆ ಕಾಲ್ ಮಾಡಿ ನಾವು ಎತ್ತಾಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.
ಲಾಕ್‌ಡೌನ್‌ಗೆ ಸಾರ್ವಜನಿಕರ ನಿರ್ಲಕ್ಷ್ಯ; ಪ್ರಧಾನಿ ಮೋದಿ ತೀವ್ರ ಬೇಸರ
ಕ್ವಾರಂಟೈನ್ ಮುದ್ರೆ ಹಾಕಿಸಿಕೊಂಡವರು ಹೊರಗಡೆ ಏನಾದರೂ ಓಡಾಡಿದರೆ ಪೊಲೀಸರು ಬಂದು ಅರೆಸ್ಟ್ ಮಾಡುತ್ತಾರೆ. ರಾಜ್ಯ ಸರ್ಕಾರ ಜಾಗೃತರಾಗಿರಿ ಎಂದು ಎಷ್ಟೇ ಹೇಳಿದ್ರೂ ಯಾರು ಕೇಳುತ್ತಿಲ್ಲ. ಹೀಗಾಗಿ ಇಂತಹ ಕ್ರಮಕ್ಕೆ ಮುಂದಾಗುತ್ತಿದ್ದೇವೆ ಎಂದು ಹೇಳಿದ್ಧಾರೆ.