ಲಾಕ್‌ಡೌನ್ ನಡುವೆ ಕೇಂದ್ರದಿಂದ ಹೊಸ ಗೈಡ್‌ಲೈನ್ಸ್!

ಸರ್ಕಾರ ಈಗಾಗಲೇ ಲಾಕ್‌ಡೌನ್ ಸಡಿಲಿಕೆ ನೀಡಿದ್ದು, ಅನೇಕ ಕೆಲಸ ಆರಂಭವಾಗಿವೆ. ಕಾರ್ಖಾನೆಗಳೂ ಆರಂಭವಾಗಿವೆ. ಹೀಗಿರುವಾಗ ಕೇಂದ್ರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಉತ್ಪಾದನೆಗಿಂತ ಹೆಚ್ಚು ಸುರಕ್ಷತೆಗೆ ಗಮನ ನೀಡುವಂತೆ ಸೂಚಿಸಿದೆ.

First Published May 10, 2020, 2:28 PM IST | Last Updated May 10, 2020, 2:32 PM IST

ನವದೆಹಲಿ(ಮೇ.10): ಸರ್ಕಾರ ಈಗಾಗಲೇ ಲಾಕ್‌ಡೌನ್ ಸಡಿಲಿಕೆ ನೀಡಿದ್ದು, ಅನೇಕ ಕೆಲಗು ಆರಂಭವಾಗಿವೆ. ಕಾರ್ಖಾನೆಗಳೂ ಆರಂಭವಾಗಿವೆ. ಹೀಗಿರುವಾಗ ಕೇಂದ್ರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಉತ್ಪಾದನೆಗಿಂತ ಹೆಚ್ಚು ಸುರಕ್ಷತೆಗೆ ಗಮನ ನೀಡುವಂತೆ ಸೂಚಿಸಿದೆ.

ಲಾಕ್‌ಡೌನ್ ಸಡಿಲಗೊಳಿಸಲಾಗಿದೆ ಎಂದ ಮಾತ್ರಕ್ಕೆ ಎಡವದಂತೆ ಎಚ್ಚರಿಸಿದೆ. ಈ ಮೂಲಕ ಈಗಾಗಲೇ ಕೊಂಚ ನಿಯಂತ್ರಣದಲ್ಲಿರುವ ಕೊರೋನಾ ಹರಡದಂತೆ ಈ ಮಾರ್ಗಸೂಚಿಯಲ್ಲಿ ಆದೇಶಿಸಿದೆ. 

ಮೊದಲ ಒಂದು ವಾರವನ್ನು ಟೆಸ್ಟ್ ವೀಕ್ ಎಂದು ಪರಿಗಣಿಸಿ ಕಾರ್ಯ ನಿರ್ವಹಿಸಲು ಕೇಂದ್ರ ಗೇಹ ಇಲಾಖೆ ಈ ಗೈಡ್‌ಲೈನ್‌ನಲ್ಲಿ ತಿಳಿಸಿದೆ.

Video Top Stories