ಪೊಲೀಸರ ಮಾತನ್ನು ನಿರ್ಲಕ್ಷಿಸಿ ಅಪಾಯ ಮೈಮೇಲೆ ಎಳೆದುಕೊಂಡ್ರಾ ನಟ ಅಲ್ಲು ಅರ್ಜುನ್?

ಪುಷ್ಪ 2 ಪ್ರೀಮಿಯರ್ ಶೋ ವೇಳೆ ನೂಕುನುಗ್ಗಲಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಪೊಲೀಸರ ಎಚ್ಚರಿಕೆ ನೀಡಿದ್ದರೂ ಅಲ್ಲು ಅರ್ಜುನ್ ಥಿಯೇಟರ್‌ಗೆ ಭೇಟಿ ನೀಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಅವರನ್ನು ಡಿಸೆಂಬರ್ 13 ರಂದು ಬಂಧಿಸಲಾಗಿತ್ತು.

First Published Dec 14, 2024, 2:38 PM IST | Last Updated Dec 14, 2024, 2:41 PM IST

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ-2 ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪುಷ್ಪ 2 ಸಿನಿಮಾ ರಿಲೀಸ್ ಆಗುವ ಹಿಂದಿನ ದಿನ ಪ್ರೀಮಿಯರ್ ಶೋ ಹೈದರಾಬಾದ್‌ನಲ್ಲಿ ನಡೆಯುತ್ತದೆ...ಈ ವೇಳೆ ಜನ ಸಂಖ್ಯೆ ಹೆಚ್ಚಿರುತ್ತದೆ ಥಿಯೇಟರ್‌ಗೆ ಭೇಟಿ ನೀಡಬೇಡಿ ಎಂದು ಪೊಲೀಸರು ಮನವಿ ಮಾಡಿರುತ್ತಾರೆ. ಪೊಲೀಸರ ಮಾತು ಮೀರಿ ಅಲ್ಲು ಅರ್ಜುನ್ ಭೇಟಿ ನೀಡಿದ ಕಾರಣ ನೂಕು ನುಗ್ಗಲು ಹೆಚ್ಚಾಗಿ ಗುಂಪಿನಲ್ಲಿ ಮಹಿಳೆಯೊಬ್ಬರು ಅಗಲುತ್ತಾರೆ. ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡುತ್ತಾರೆ. ಈ ಹಿನ್ನಲೆಯಲ್ಲಿ ಪೊಲೀಸರು ಡಿಸೆಂಬರ್ 13ರಂದು ಅಲ್ಲು ಅರ್ಜುನ್‌ರನ್ನು ಅರೆಸ್ಟ್‌ ಮಾಡಲಾಗುತ್ತದೆ. ಈ ಘಟನೆ ಕಿವಿ ಬೀಳುತ್ತಿದ್ದಂತೆ ಅಲ್ಲು ಅರ್ಜುನ್ ಕುಟುಂಬಕ್ಕೆ 25 ಲಕ್ಷ ಹಣ ಸಹಾಯ ಮಾಡುವುದಾಗಿ ತಿಳಿಸುತ್ತಾರೆ. ಇಲ್ಲಿ ಪೊಲೀಸರು ಸೂಚನೆ ನೀಡಿದ ಮೇಲೂ ಅರ್ಜುನ್ ಭೇಟಿ ನೀಡಿದ್ದು ತಪ್ಪು ಎನ್ನಲಾಗುತ್ತಿದೆ. 

ದೇವರಿದ್ದಾನೆ ಅವನೇ ನೋಡಿಕೊಳ್ಳುತ್ತಾರೆ; ಪವಿತ್ರ ಗೌಡ ಜಾಮೀನು ಸಿಕ್ಕ ಬೆನ್ನಲ್ಲೇ ಮಗಳ ಪೋಸ್ಟ್‌