Asianet Suvarna News Asianet Suvarna News

ಬೀದಿಗೆ ಬಂತು ನಟ ಮೋಹನ್ ಬಾಬು ಮಕ್ಕಳ ಕಿತ್ತಾಟ: ವಿಡಿಯೋ ವೈರಲ್!

 ತೆಲುಗು ಸ್ಟಾರ್‍ ನಟ ಮೋಹನ್ ಬಾಬು ಪುತ್ರರಾದ ಮಂಚು ಮನೋಜ್ ಹಾಗೂ ಮಂಚು ವಿಷ್ಣು ನಡುವೆ ಗಲಾಟೆಯಾದ ವಿಡಿಯೋ  ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. 

 ತೆಲುಗು ಸ್ಟಾರ್‍ ನಟ ಮೋಹನ್ ಬಾಬು ಪುತ್ರರಾದ ಮಂಚು ಮನೋಜ್ ಹಾಗೂ ಮಂಚು ವಿಷ್ಣು ನಡುವೆ ಗಲಾಟೆಯಾದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮನೋಜ್ ಧ್ವನಿ ಕೂಡ ಕೇಳಿಸುತ್ತದೆ. 'ನೋಡಿ, ಅಣ್ಣ ಮನೆಗೆ ಬಂದು ಹೇಗೆ ವರ್ತಿಸುತ್ತಿದ್ದಾನೆ, ಹೊಡೆಯುತ್ತಿದ್ದಾನೆ..' ಎಂದು ಹೇಳಿದ್ದಾರೆ. ಈ ಜಗಳಕ್ಕೆ ಎರಡನೇ ಮದುವೆ ಕಾರಣವೇ ಎಂದು ಹೇಳಲಾಗುತ್ತಿದ್ದು 2015ರಲ್ಲಿ ಮನೋಜ್ ಪ್ರಣತಿ ರೆಡ್ಡಿ  ಮದುವೆ ಆಗಿದ್ದು, ಇಬ್ಬರು 2019ರಲ್ಲಿ ವಿಚ್ಛೇದನ ಪಡೆದುಕೊಂಡು ಬೇರೆ ಬೇರೆಯಾದರು.ಈಗ 2023ರಲ್ಲಿ ಮನೋಜ್, ಭೂಮಾ ಮೌನಿಕಾ ಜತೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಆದರೆ ಈ ಮದುವೆ ವಿಷ್ಣುಗೆ ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ.