ತಮನ್ನಾಗೆ ವಿಜಯ್ ವರ್ಮಾ ಫಸ್ಟ್ ಲವ್ ಅಲ್ಲ: ಮಿಲ್ಕಿ ಬ್ಯೂಟಿಗೆ ಆಗಿದೆಯಂತೆ ಎರಡು ಭಾರಿ ಬ್ರೇಕಪ್

ಕಾವಲಯ್ಯನ ಗುಂಗು ಸ್ತ್ರೀ ಡಾನ್ಸ್​​ರ ರಂಗು ನೋಡಿ ಪಡ್ಡೆ ಹೈಕ್ಳು ತಮನ್ನಾ ನಶೆಯಿಂದ ಹೊರ ಬಂದಿಲ್ಲ. ಮೊನ್ನೆಯಷ್ಟೆ ರಾಧೆ ಅವತಾರ ತಾಳಿ ಹುಚ್ಚು ಹಿಡಿಸಿದ್ದ ತಮನ್ನಾ ಈಗ ತನ್ನ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಮೊನ್ನೆ ಮೊನ್ನೆಯವರೆಗೂ ಕೃಷ್ಣನ ಕನವರಿಕೆಯಲ್ಲಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈಗ ತನ್ನ ಪ್ರೇಮ ಕಹಾನಿಗಳನ್ನ ಬಿಚ್ಚಿಟ್ಟಿದ್ದಾರೆ. ಒಂದು ಒಂದೇ ಲವ್ ಎಲ್ಲ ಎರಡೆರಡು ಲವ್​ಗಳು ಇದ್ವು. ಆದ್ರೆ ಈಗ ಅವೆಲ್ಲಾ ಬ್ರೇಕಪ್ ಆಗಿವೆ ಅಂತ ತಮನ್ನಾ ಓಪನ್ ಸ್ಟೇಟ್ಮೆಂಟ್​ ಕೊಟ್ಟಿದ್ದಾರೆ. ಹಾಗಾದ್ರೆ ತಮನ್ನ ಲವ್ ಬ್ರೇಕಪ್​ ಕಹಾನಿ ಏನದು ನೋಡೋಣ ಬನ್ನಿ. ತಮನ್ನಾ ಭಾಟಿಯಾ. ಭಾರತೀಯ ಚಿತ್ರ ಜಗತ್ತಿನ ದಂತದ ಗೊಂಬೆ. ಈಕೆಯ ವಯ್ಯಾರಕ್ಕೆ, ಕಣ್ಣೋಟಕ್ಕೆ, ಬಳುಕೋ ಬಳ್ಳಿಯಂತಿರೋ ಆ ದೇಹ ಸಿರಿಗೆ ಮರುಳಾಗದವರೇ ಇಲ್ಲ. ದಶಕದಿಂದಲೂ ಚಿತ್ರರಂಗವನ್ನಾಳುತ್ತಿರೋ ಮಿಲ್ಕಿ ಬ್ಯೂಟಿ ತಮನ್ನಾ ಸಧ್ಯ ಐಟಂ ಡಾನ್ಸ್​ ಲೋಕದ ಮಾಯಾಂಗನೆ. 

ಕಾವಲಯ್ಯನ ಗುಂಗು ಸ್ತ್ರೀ ಡಾನ್ಸ್​​ರ ರಂಗು ನೋಡಿ ಪಡ್ಡೆ ಹೈಕ್ಳು ತಮನ್ನಾ ನಶೆಯಿಂದ ಹೊರ ಬಂದಿಲ್ಲ. ಮೊನ್ನೆಯಷ್ಟೆ ರಾಧೆ ಅವತಾರ ತಾಳಿ ಹುಚ್ಚು ಹಿಡಿಸಿದ್ದ ತಮನ್ನಾ ಈಗ ತನ್ನ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ. ತಮನ್ನಾಗೂ ಎರಡೆರಡು ಬ್ರೇಕಪ್ ಆಗಿವೆ. ತಮನ್ನಾ ಹೃದಯ ಕೂಡ ಪ್ರೀತಿಗೆ ಎರಡೆರಡು ಭಾರಿ ಒಡೆದು ಚೂರಾಗಿದೆಯಂತೆ. ನನ್ನ ಜೀವನದಲ್ಲಿ ನನ್ನ ವಿಕಾಸಕ್ಕೆ ಈ ಎರಡು ಬ್ರೇಕಪ್ ತುಂಬಾ ಅಗತ್ಯವಾಗಿತ್ತು ನನ್ನ ಮೊದಲ ಬ್ರೇಕಪ್ ಯಾಕೆ ಆಯಿತು ಎಂದರೆ ನಾನು ತುಂಬಾ ಚಿಕ್ಕವಳಾಗಿದ್ದೆ. ಆ ಬ್ರೇಕಪ್ ಆಗುವಾಗ ನಾನು ಎಂಥಹ ಸ್ಥಿತಿಯಲ್ಲಿದ್ದೆ ಎಂದರೆ ನನಗೆ ಕೊಟ್ಟಷ್ಟೂ ಬೇಕೆನಿಸುತ್ತಿತ್ತು. ಆ ಒಂದು ವ್ಯಕ್ತಿಗಾಗಿ ನಾನು ಸಾಕಷ್ಟನ್ನು ಬಿಟ್ಟು ಕೊಟ್ಟಿದ್ದೆ. ನೋಡೋಕೆ, ಮಾಡೋಕೆ ತುಂಬಾ ಇದೆ ಎಂದು ನನಗೆ ಆ ಮೇಲೆ ಅನಿಸಿತು.

ಇನ್ನೊಂದು ಹಾರ್ಟ್​ಬ್ರೇಕ್​ನಲ್ಲಿ ಆ ವ್ಯಕ್ತಿ ನನಗೆ ಸರಿಯಾದವನಲ್ಲ ಎನಿಸಿತ್ತು. ಒಬ್ಬ ದೀರ್ಘಕಾಲದ ಸಂಗಾತಿಯಾಗಿ ಒಂದು ಇನ್​​ಫ್ಲುಯೆನ್ಸ್ ಆಗಿ ಆ ವ್ಯಕ್ತಿ ನನ್ನ ಬದುಕಿಗೆ ಸೂಟ್ ಆಗಲ್ಲ ಎನಿಸಿತ್ತು. ಮಿಲ್ಕಿ ಬ್ಯೂಟಿ ತಮನ್ನಾ ಕಳೆದ ಕೆಲವು ವರ್ಷಗಳಿಂದ ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಇತ್ತೀಚಿಗೆ ಅನೇಕ ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಕಳೆದ ವರ್ಷ ಗೋವಾದಲ್ಲಿ ಹೊಸ ವರ್ಷವನ್ನು ಜೊತೆಯಾಗಿ ಆಚರಿಸಿದ್ರು. ಲಸ್ಟ್ ಸ್ಟೋರಿಸ್ 2ನಲ್ಲೂ ಒಬ್ಬರು ಒಟ್ಟಿಗೆ ನಟಿಸಿದ್ರು. ಆದ್ರೆ ಈಗ ತಮನ್ನ ಬ್ರೆಕಪ್ ಸ್ಟೋರಿ ಹೇಳಿದ್ದನ್ನ ಕೇಳಿ ತಮನ್ನಾಗೆ ಯಾರ ಜೊತೆ ಬ್ರೇಕಪ್ ಆಗಿದೆ ಅನ್ನೋ ಹುಡುಕಾಟ ಟಾಲಿವುಡ್​​ ಶುರುವಾಗಿದೆ

Related Video