ನಟಿ ಲಿಪ್‌ಲಾಕ್ ಸೀನ್‌ಗೆ ಒಪ್ಪಿದ್ರೂ ಹೀರೋ ಒಪ್ಪಲಿಲ್ಲ: 3 ಸ್ಟಾರ್‌ಗಳಿಗೂ ಇವರೇ ಹೀರೋಯಿನ್!

ತಮಿಳಿನ ಸೂಪರ್ ಹಿಟ್ ಸಿನಿಮಾ 96 ಕಾಡುವ ಚಿತ್ರಗಳಲ್ಲಿ ಒಂದು. ಎವರ್‌ಗ್ರೀನ್ ಬ್ಯೂಟಿ ತ್ರಿಶಾ ಮತ್ತು ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ಅಭಿನಯ ಈ ಸಿನಿಮಾಕ್ಕೆ ಮತ್ತಷ್ಟು ಮೆರಗು ತಂದಿತ್ತು. 

Share this Video
  • FB
  • Linkdin
  • Whatsapp

ತಮಿಳಿನ ಸ್ಟಾರ್ ನಟರೊಬ್ಬರು ನಟಿಯ ಜೊತೆಗೆ ಲಿಪ್ ಲಾಕ್ ಮಾಡಲು ಒಪ್ಪದಿದ್ದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ತಮಿಳಿನ ಸೂಪರ್ ಹಿಟ್ ಸಿನಿಮಾ 96 ಕಾಡುವ ಚಿತ್ರಗಳಲ್ಲಿ ಒಂದು. ಎವರ್‌ಗ್ರೀನ್ ಬ್ಯೂಟಿ ತ್ರಿಶಾ ಮತ್ತು ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ಅಭಿನಯ ಈ ಸಿನಿಮಾಕ್ಕೆ ಮತ್ತಷ್ಟು ಮೆರಗು ತಂದಿತ್ತು. ಒಂದೊಂದು ದೃಶ್ಯಗಳು ಮನಸ್ಸಿನಾಳಕ್ಕೆ ಇಳಿಯುತ್ತವೆ. ಇಬ್ಬರ ಕಣ್ಣ ಭಾಷೆಗಳೆ ಸಾಕು ಸಿನಿಮಾ ಗೆಲ್ಲಿಸಲು ಎನ್ನಿಸುತ್ತದೆ. ಅದರಲ್ಲೂ ಕೊನೆಯ ಏರ್‌ಪೋರ್ಟ್ ದೃಶ್ಯ ಸಿನಿಮಾದ ಪ್ಲಸ್ ಪಾಯಿಂಟ್. ಆದರೆ, ಅಲ್ಲೊಂದು ಲಿಪ್ ಲಾಕ್ ದೃಶ್ಯವಿತ್ತಂತೆ! ಹೌದು....ಸಿನಿಮಾದ ಜೀವನಾಳವಾಗಿರುವ ವಿದಾಯದ ದೃಶ್ಯದಲ್ಲಿ ಒಂದು ಕಿಸ್ಸಿಂಗ್ ಸೀನ್ ಇತ್ತಂತೆ. ನಿರ್ದೇಶಕ ಪ್ರೇಮ್‌ಕುಮಾರ್ ಅದನ್ನು ಬರೆದಿದ್ದರಂತೆ. ಆದರೆ ವಿಜಯ್​ ಅವರು ಒಪ್ಪದ ಕಾರಣ, ಚುಂಬನದ ದೃಶ್ಯವಿಲ್ಲದೆ ಶೂಟಿಂಗ್​ ಮಾಡಲಾಗಿತ್ತು. ಇದರ ಬದಲಾಗಿ, ಅವರು ತಮ್ಮ ಮುಖದ ಮೇಲೆ ತಮ್ಮ ಕೈಗಳನ್ನು ಹಾಕಿ ಚುಂಬಿಸುವಂತೆ ಕಾಣಿಸಿಕೊಂಡರು.

Related Video