ಬಿದ್ದು ಗೆದ್ದ ಅಮಿತಾಭ್ ಬಚ್ಚನ್: ತಲೈವಾ ರಜನಿಕಾಂತ್ ಹೇಳಿದ ಇನ್​ಸ್ಪೈರಿಂಗ್ ಸ್ಟೋರಿ!

ಸೂಪರ್​ಸ್ಟಾರ್ ರಜನಿಕಾಂತ್ ನಟನೆಯ ವೆಟ್ಟೈಯಾನ್ ಸಿನಿಮಾ ಇದೇ ವಾರ ವರ್ಲ್ಡ್​ವೈಡ್ ತೆರೆಗೆ ಬರ್ತಾ ಇದೆ. ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಬಿಗ್ ಬಿ ಅಮಿತಾಭ್ ಕೂಡ ನಟಿಸಿದ್ದು ಬಿಗ್ ಸ್ಕ್ರೀನ್ ಮೇಲೆ ಈ ದಿಗ್ಗಜರ ಜುಗಲ್​ಬಂದಿ ನೋಡೋದಕ್ಕೆ ಸಿಕ್ತಾ ಇದೆ. 

Share this Video
  • FB
  • Linkdin
  • Whatsapp

ಸೂಪರ್​ಸ್ಟಾರ್ ರಜನಿಕಾಂತ್ ನಟನೆಯ ವೆಟ್ಟೈಯಾನ್ ಸಿನಿಮಾ ಇದೇ ವಾರ ವರ್ಲ್ಡ್​ವೈಡ್ ತೆರೆಗೆ ಬರ್ತಾ ಇದೆ. ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಬಿಗ್ ಬಿ ಅಮಿತಾಭ್ ಕೂಡ ನಟಿಸಿದ್ದು ಬಿಗ್ ಸ್ಕ್ರೀನ್ ಮೇಲೆ ಈ ದಿಗ್ಗಜರ ಜುಗಲ್​ಬಂದಿ ನೋಡೋದಕ್ಕೆ ಸಿಕ್ತಾ ಇದೆ. ಸದ್ಯ ಅಮಿತಾಭ್ ಬದುಕಿನ ಏರುಪೇರಿನ ಬಗ್ಗೆ ತಲೈವಾ ಮಾತನಾಡಿದ್ದು, ಸಖತ್ ಟ್ರೆಂಡ್ ಆಗ್ತಾ ಇದೆ. ಬಿಗ್ ಬಿ ಅಮಿತಾಭ್ ಬಚ್ಚನ್ - ಸೂಪರ್ ಸ್ಟಾರ್ ರಜನಿಕಾಂತ್.. ಇಬ್ಬರು ಕೂಡ ಇಂಡಿಯನ್ ಸಿನಿ ಇಂಡಸ್ಟ್ರಿಯ ಲೆಜೆಂಡ್ಸ್.. ಇಬ್ಬರು ಕೂಡ 5 ದಶಕಗಳಿಂದ ಭಾರತೀಯ ಸಿನಿಪ್ರಿಯರನ್ನ ರಂಜಿಸ್ತಾ ಬಂದಿದ್ದಾರೆ. ಇದೀಗ ದಶಕಗಳ ಬಳಿಕ ಈ ಇಬ್ಬರು ಲೆಜೆಂಡ್ಸ್ ಮತ್ತೆ ಸ್ಕ್ರೀನ್ ಶೇರ್ ಮಾಡಿದ್ದು ವೆಟ್ಟೈಯಾನ್​ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. 

ಗುರುವಾರ ವೆಟ್ಟೈಯಾನ್ ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬರ್ತಾ ಇದ್ದು, ಈ ಇಬ್ಬರು ದಿಗ್ಗಜರನ್ನ ಒಟ್ಟಾಗಿ ಬಿಗ್ ಸ್ಕ್ರೀನ್ ಮೇಲೆ ನೋಡಲಿಕ್ಕೆ ಫ್ಯಾನ್ಸ್ ಕುತೂಹಲದಿಂದ ಕಾಯ್ತಾ ಇದ್ದಾರೆ. ಅಸಲಿಗೆ ಈ ಸಿನಿಮಾದಲ್ಲಿ ರಜನಿಕಾಂತ್​ ಎನ್​ಕೌಂಟರ್​ ಸ್ಪೆಷಲಿಸ್ಟ್ ಆಫೀಸರ್ ಅಗಿ ಕಾಣಿಸಿಕೊಂಡಿದ್ದು, ಅವರಿಗೆ ಕೌಂಟರ್ ಕೊಡೋ ರೋಲ್​ನಲ್ಲಿ ಅಮಿತಾಭ್ ಮಿಂಚಿದ್ದಾರೆ. ಇತ್ತೀಚಿಗೆ ರಜನಿಕಾಂತ್ ವೆಟ್ಟೈಯಾನ್ ಆಡಿಯೋ ಲಾಂಚ್ ಇವೆಂಟ್​​ನಲ್ಲಿ ಅಮಿತಾಭ್ ಬಚ್ಚನ್ ಮತ್ತು ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 1990ರ ದಶಕದ ಕೊನೆಗೆ ಅಮಿತಾಭ್​ ನಷ್ಟದಲ್ಲಿ ಮುಳುಗಿದ್ದು, ಅವ್ರ ಎಬಿಸಿ ಕಂಪನಿ ನಷ್ಟಸಲ್ಲಿ ಸಿಲುಕಿ ಮನೆಮಾರಿಕೊಂಡಿದ್ದು.. ಆ ಸಮಯದಲ್ಲಿ ಬಿಗ್ ಬಿ ನಡೆಸಿದ ಹೋರಾಟದ ಬಗ್ಗೆ ತಲೈವಾ ಮನಬಿಚ್ಚಿ ಮಾತನಾಡಿದ್ದಾರೆ. 

ಅಮಿತಾಭ್ ಬಚ್ಚನ್​ರ ಎಬಿಸಿ ಕಂಪನಿ ನಷ್ಟವಾಗಿ ಗಳಿಸಿದ್ದೆಲ್ಲವನ್ನೂ ಕಳೆದುಕೊಂಡಿದ್ರು. ಮನೆಮಾರಿಕೊಂಡಿದ್ರು. ಲಂಬೂ ಬೀದಿಗೆ ಬಂದುಬಿಟ್ಟ ಅಂತ ಅವರ ವಿರೋಧಿಗಳು ಮಾತನಾಡಿಕೊಂಡಿದ್ರು. ಡ್ರೈವರ್, ವಾಚ್​ಮನ್​ಗೆ ಸಂಬಳ ಕೊಡೋದಕ್ಕೂ ಆಗದ ಸ್ಥಿತಿಗೆ ಅಮಿತಾಭ್ ತಲುಪಿದ್ರು. ಆಗ ಅಮಿತಾಭ್ ಬಚ್ಚನ್ ಸುಮ್ಮನೇ ಕೂರಲಿಲ್ಲ. ಯಶ್ ಛೋಪ್ರ ಬಳಿ ಹೋಗಿ ನಟನೆಯ ಅವಕಾಶ ಕೇಳಿದ್ರು. ಮೊಹಬ್ಬತೆ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ರು. ಕೆಬಿಸಿ ನಿರೂಪಣೆ ಮಾಡತೊಡಗಿದ್ರು. ದಿನದ 18ಗಂಟೆ ಕೆಲಸ ಮಾಡಿದ್ರು. ಸಿಕ್ಕ ಕೆಲಸವನ್ನೆಲ್ಲಾ ಕಷ್ಟಪಟ್ಟು ಮಾಡಿದ್ರು. ಕೊನೆಗೂ ಗಳಿಸಿದ್ದನ್ನೆಲ್ಲಾ ಮರಳಿ ಪಡೆದುಕೊಂಡಿದ್ರು. 

ಮಾರಿದ್ದ ಮನೆ ಜೊತೆಗೆ ಅದೇ ರಸ್ತೆಯಲ್ಲಿ ಮತ್ತೆ ಮೂರು ಮನೆ ಕೊಂಡುಕೊಂಡ್ರು. ಹೌದು 1990ರ ದಶಕದ ಕೊನೆಯಲ್ಲಿ ಸೋತು ಸುಣ್ಣವಾಗಿದ್ದ ಅಮಿತಾಭ್ ಹೇಗೆ ತಮ್ಮ ಸಾಮ್ರಾಜ್ಯವನ್ನ ಮರಳಿ ಕಟ್ಟಿಕೊಂಡ್ರು. ಅದೆಷ್ಟು ಕಷ್ಟಪಟ್ಟು ಮತ್ತೆ ಎದ್ದು ನಿಂತ್ರು ಅನ್ನೋದನ್ನ ರಜನಿ ಹೇಳಿದ್ದಾರೆ. ಬಿಗ್ ಬಿ ಈಸ್ ಗ್ರೇಟ್ ಅಂದಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಿಗ್ ಬಿ ಅಮಿತಾಭ್ ಇಬ್ಬರು ತಮ್ಮ 5 ದಶಕಗಳ ವೃತ್ತಿ ಬದುಕಲ್ಲಿ ಹಲವು ಏರು ಪೇರು ಕಂಡವರು. ಇವತ್ತಿಗೆ ರಜನಿಕಾಂತ್​ಗೆ 73 ವರ್ಷ, ಮತ್ತು ಅಮಿತಾಭ್​ಗೆ 81ರ ಹರೆಯ. ಈಗಲೂ ಯಂಗ್ ಸ್ಟಾರ್​ಗಳನ್ನೂ ಮೀರಿಸುವಂತೆ ತೆರೆ ಮೇಲೆ ಮಿಂಚುವ ಇವ್ರ ಎನರ್ಜಿ, ಚಾರ್ಮ್​ಗ ಸರಿಸಾಟಿಯೇ ಇಲ್ಲ. ಇದೀಗ ವೆಟ್ಟೈಯಾನ್ ಮೂಲಕ ಈ ಇಬ್ಬರನ್ನೂ ಒಟ್ಟಾಗಿ ನೋಡೋ ಗೋಲ್ಡನ್ ಚಾನ್ಸ್ ಸಿನಿಪ್ರಿಯರಿಗೆ ಸಿಕ್ತಾ ಇದೆ. 

Related Video