
'ಜ್ಯೂಲಿಯಟ್ 2' ಟ್ರೈಲರ್ ರಿಲೀಸ್: ಇದು ಶಾಂತರೂಪದ ನಾಯಕಿಯ ದುರ್ಗೆ ಅವತಾರ
ಟೀಸರ್ ಮತ್ತು ಹಾಡುಗಳಿಂದ ಟ್ರೆಂಡಿಂಗ್ ಸೃಷ್ಟಿಸಿದ ಜ್ಯೂಲಿಯಟ್ 2 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಜ್ಯೂಲಿಯಟ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ತಂದೆ-ತಾಯಿ ಸಂಬಂಧದ ಬೆಲೆ ಏನು ಅಂತ ತಿಳಿಯೋದ್ರ ಜೊತೆಗೆ ತುಂಬಾ ಟ್ವಿಸ್ಟ್ ಆಂಡ್ ಟರ್ನ್'ಗಳು ಇರಲಿದೆ. ಪ್ರೇಮಂ ಪೂಜ್ಯಂ ಸಿನಿಮಾದ ನಟಿ ಬೃಂದಾ ಆಚಾರ್ಯ ಜ್ಯೂಲಿಯೆಟ್ ಪಾತ್ರದಲ್ಲಿ ನಟಿಸಿದ್ದಾರೆ. ಜ್ಯೂಲಿಯೆಟ್ ಚಿತ್ರದ ಹೆಸರೇ ಹೇಳುವಂತೆ ಬೃಂದಾ ಅವರ ಪಾತ್ರದ ಸುತ್ತ ಕತೆ ಗಿರಕಿ ಹೊಡೆಯುತ್ತೆ. ಪಟ್ಟಣದಿಂದ ಹಳ್ಳಿಗೆ ಸೇರುವ ನಾಯಕಿಯ ಬದುಕಲ್ಲಿ ನಂತರ ನಡೆಯುವ ಘಟನೆ ಸಿನಿಮಾದಲ್ಲಿದೆ. ಶಾರದೆಯಂತೆ ಶಾಂತರೂಪಿಯಾದ ನಾಯಕಿಯನ್ನ ಹೇಗೆ ದುರ್ಗೆಯನ್ನಾಗಿಸುತ್ತೆ ಚಿತ್ರದ ಒನ್ ಲೈನ್ ಸ್ಟೋರಿ ಎಂಬುದು ಕುತೂಹಲ ಮೂಡಿಸಿದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್'ನಲ್ಲಿ ಪಂಚ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ಲಿಖಿತ್ ಆರ್. ಕೋಟ್ಯಾನ್ ನಿರ್ಮಾಣ ಮಾಡಿರೋ ಜ್ಯೂಲಿಯೆಟ್ 2 ಚಿತ್ರಕ್ಕೆ ವಿರಾಟ್ ಬಿ.ಗೌಡ ನಿರ್ದೇಶನ ಮಾಡಿದ್ದಾರೆ.