Asianet Suvarna News Asianet Suvarna News

ಕನ್ನಡಿಗರನ್ನು ಕೆರಳಿಸಿದ ಹೇಳಿಕೆ, ಕ್ಷಮೆಯಾಚಿಸಿ ತೇಪೆ ಹಚ್ಚಿದ ಟಾಲಿವುಡ್ ನಾನಿ..!

ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಂತೆ ಸುಂದರಾನಿಕಿ ಎಂಬ ಹೊಸ ಸಿನಿಮಾವೊಂದು ಬರುತ್ತಿದೆ. ಈ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿಲ್ವಂತೆ.

ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಂತೆ ಸುಂದರಾನಿಕಿ ಎಂಬ ಹೊಸ ಸಿನಿಮಾವೊಂದು ಬರುತ್ತಿದೆ. ಈ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿಲ್ವಂತೆ. ಯಾಕ್ರೀ ಡಬ್ ಮಾಡಿಲ್ಲ ಎಂದು ಯಾರೋ ಕೇಳಿದ್ದಕ್ಕೆ, ಕನ್ನಡಿಗರು ನಮ್ಮ ಅಣ್ತಮ್ಮಂದಿರು ಇದ್ದ ಹಾಗೆ. ಅವರು ನಮ್ಮ ತೆಲುಗು ಸಿನಿಮಾವನ್ನೇ ನೋಡ್ತಾರೆ, ಅವರು ತೆಲುಗು ಸಿನಿಮಾವನ್ನೇ ಇಷ್ಟಪಡುತ್ತಾರೆ. ಹಾಗಾಗಿ ಕನ್ನಡಕ್ಕೆ ಡಬ್ ಮಾಡಿಲ್ಲ ಎಂದಿದ್ದಾರೆ. ಇದಕ್ಕೆ ಕನ್ನಡಿಗರೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕ್ಷಮೆ ಕೇಳಿದ ನಾನಿ, ನಾನು ಹೇಳಿದ್ದು ಹಾಗಲ್ಲ, ಹೀಗಲ್ಲ ಎಂದು ತೇಪೆ ಹಚ್ಚಿದ್ದಾರೆ.