
Mahesh Babu: ಪ್ರಿನ್ಸ್ ಮಹೇಶ್ ಬಾಬು ಮನೆಯಲ್ಲಿ ಆಸ್ತಿ ಲಡಾಯಿ: ನರೇಶ್‌ಗೂ ಬರುತ್ತಾ ಪಾಲು?
ತೆಲುಗಿನ ಸೂಪರ್ ಸ್ಟಾರ್ ಕೃಷ್ಣರ ಸಾವಿನ ಬಳಿಕ, ಪ್ರಿನ್ಸ್ ಮಹೇಶ್ ಬಾಬು ಮನೆಯಲ್ಲಿ ಆಸ್ತಿ ವಿಚಾರ ಭುಗಿಲೆದ್ದಿದೆ ಎಂದು ಸುದ್ದಿ ಹರಿದಾಡ್ತಿದೆ.
ಮಹೇಶ್ ಬಾಬು ತಂದೆ ಕೃಷ್ಣ ಅವರ ನಿಧನದ ಬಳಿಕ ಪ್ರಿನ್ಸ್ ಮನೆಯಲ್ಲಿ ಆಸ್ತಿ ಗಲಾಟೆ ಶುರುವಾಗಿದೆ ಅಂತೆ. ಕೃಷ್ಣ ಅವರು ಬರೋಬ್ಬರಿ 400 ಕೋಟಿ ಆಸ್ತಿಯ ಒಡೆಯ. ಹೀಗಾಗಿ ಅವರ ನಿಧನ ಹೊಂದಿದ ಮೇಲೆ ಆ ಅಷ್ಟು ಆಸ್ತಿ ಯಾರಿಗೆ ಸೇರಬೇಕು ಅನ್ನೋ ಚರ್ಚೆ ಶುರುವಾಗಿದೆ. ಇದರಲ್ಲಿ ನರೇಶ್ ಹೆಸರು ಕೂಡ ಸೇರಿಕೊಂಡಿದೆ. ಕೃಷ್ಣ ಅವರು ತಮ್ಮ ಪತ್ನಿ ಇಂದಿರಾ ದೇವಿ ಪರ್ಮೀಷನ್ ಪಡೆದುಕೊಂಡು, 1969ರಲ್ಲಿ ಮತ್ತೊಂದು ಮದುವೆ ಆಗುತ್ತಾರೆ. ಕೃಷ್ಣ ಅವರ ಎರಡನೇ ಹೆಂಡತಿ ವಿಜಯ ನಿರ್ಮಲಾ. ಆದ್ರೆ ವಿಜಯ ನಿರ್ಮಲಾಗೂ ಕೂಡ ಇದು ಎರಡನೇ ಮದುವೆ. ಹಾಗೂ ಅವರಿಗೆ ಮೊದಲೇ ಒಬ್ಬ ಮಗನಿದ್ದ. ಅವರೇ ಪವಿತ್ರಾ ಲೋಕೇಶ್ ಜೊತೆ ತಳುಕು ಹಾಕಿಕೊಂಡಿರುವ ನರೇಶ್. ಹೀಗಾಗಿ ನರೇಶ್ ಕೂಡ ಮಹೇಶ್ ಬಾಬು ಕುಟುಂಬಕ್ಕೆ ಸೇರಿಕೊಳ್ತಾರೆ ಅಂತ ಹೇಳಬಹುದು. ಹೀಗಾಗಿ ಮಹೇಶ್ ಬಾಬು ತಂದೆ ಕೃಷ್ಣ ಮಾಡಿಟ್ಟ 400 ಕೋಟಿ ರೂ. ಆಸ್ತಿಯಲ್ಲಿ ನರೇಶ್ ಅವರಿಗೂ ಪಾಲು ಬರುತ್ತಾ ಅನ್ನೋ ಚರ್ಚೆ ಎದ್ದಿದೆ.
ಶೂಟಿಂಗ್ ಸೆಟಲ್ಲಿ ಎಷ್ಟು ವಿಚಿತ್ರವಾಗಿರುತ್ತಾರೆ ಜಾನ್ವಿ ಕಪೂರ್ ನೋಡಿ...