ಈ ಜೋಡಿಗಳಿಗೆ ಹೊಸ ಬದುಕು ಕೊಟ್ಟ 2023: ಈ ವರ್ಷ 2ನೇ ಮದುವೆ ಆದ ಸ್ಟಾರ್ಸ್ ಇವರೇ!

2023 ಮುಗೀತಾ ಬಂತು. ಇನ್ನು 8 ದಿನ ಕಳೆದ್ರೆ ನ್ಯೂ ಈಯರ್ ವೆಲ್ಕಮ್ ಮಾಡಿಕೊಳ್ತೇವೆ. ಹಾಗೆ ಈ ವರ್ಷದ ಕೆಲ ಘಟನೆಗಳನ್ನ ನೆನಪಿಸಿಕೊಳ್ಳದಿದ್ರೆ ಹೇಗೆ ಅಲ್ವಾ.? ಯೆಸ್, ಈ ವರ್ಷ ಹಲವು ಸ್ಟಾರ್‌ಗಳು ದಾಂಪತ್ಯ ಜೀವನ ಶುರು ಮಾಡಿದ್ದಾರೆ. 

Share this Video
  • FB
  • Linkdin
  • Whatsapp

2023 ಮುಗೀತಾ ಬಂತು. ಇನ್ನು 8 ದಿನ ಕಳೆದ್ರೆ ನ್ಯೂ ಈಯರ್ ವೆಲ್ಕಮ್ ಮಾಡಿಕೊಳ್ತೇವೆ. ಹಾಗೆ ಈ ವರ್ಷದ ಕೆಲ ಘಟನೆಗಳನ್ನ ನೆನಪಿಸಿಕೊಳ್ಳದಿದ್ರೆ ಹೇಗೆ ಅಲ್ವಾ.? ಯೆಸ್, ಈ ವರ್ಷ ಹಲವು ಸ್ಟಾರ್‌ಗಳು ದಾಂಪತ್ಯ ಜೀವನ ಶುರು ಮಾಡಿದ್ದಾರೆ. ಆದ್ರೆ ಅವರಲ್ಲಿ ಎರಡನೇ ಮದುವೆ ಆದವರ ಪಟ್ಟಿಯೂ ಇದೆ. ಈ ವರ್ಷ ಅನೇಕ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್‌ವುಡ್‌, ಬಾಲಿವುಡ್, ಕಾಲಿವುಡ್, ಟಾಲಿವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಹೊಸ ಜೀವನ ಆರಂಭಿಸಿದ ತಾರೆಯರು ಒಂದ್ಕಡೆಯಾದರೆ, ಇನ್ನೊಂದ್ಕಡೆ ಕೆಲವರು ತಾರೆಯರು ಎರಡನೇ ಮದುವೆ ಮಾಡಿಕೊಂಡದ್ರು. ಅವರಲ್ಲಿ ಸಿಗೋ ಮೊದಲಿಗರು ನಟಿ ಅಮಲಾ ಪೌಲ್. ಬಹುಭಾಷಾ ನಟಿ ಅಮಲಾ ಪೌಲ್ ಈ ವರ್ಷ ಎರಡನೇ ಮದುವೆ ಆಗಿದ್ದಾರೆ. 

ಮೊದಲ ಪತಿ ಎ.ಎಲ್ ವಿಜಯ್ಗೆ ವಿಚ್ಛೇಧನ ನೀಡಿ ಬಾಯ್‌ಫ್ರೆಂಡ್‌ ಜಗತ್ ದೇಸಾಯಿ ಜತೆ ಈ ವರ್ಷ ಮದುವೆ ಆದ್ರು. ಕೊಚ್ಚಿಯಲ್ಲಿ ಅಮಲಾ ಪೌಲ್ - ಜಗತ್ ದೇಸಾಯಿ ಮದುವೆ ನಡೆದಿತ್ತು. ಸ್ಯಾಂಡಲ್ವುಡ್ನ ಹಲವು ಸಿನಿಮಾಗಳನ್ನ ಬಣ್ಣ ಹಚ್ಚಿ ಫೇಮಸ್ ಆಗಿರೋ ಖಳನಟ ಆಶೀಶ್ ವಿದ್ಯಾರ್ಥಿ ತನ್ನ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ್ರು. ಮೊದಲ ಪತ್ನಿ ರಾಜೋಶಿ ಬರುವಾ ಡಿವೋರ್ಸ್ ಕೊಟ್ಟ ಆಶೀಶ್ ವಿಧ್ಯಾರ್ಥಿ ಅಸ್ಸಾಂ ಮೂಲದ ರೂಪಾಲಿ ಅವರನ್ನ ಮದುವೆ ಆಗಿ ಸಂಸಾರ ನಡೆಸುತ್ತಿದ್ದಾರೆ. ಅಷ್ಟೆ ಅಲ್ಲ ತೆಲುಗು ನಟ ಮಂಚು ಮನೋಜ್ ಕೂಡ ಈ ವರ್ಷ ಎರಡನೇ ಮದುವೆಯಾದ್ರು. ಮೊದಲ ಹೆಂಡತಿ ಪ್ರಣತಿ ರೆಡ್ಡಿ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಹಾಕಿದ ಮಂಚು ಮನೋಜ್ ಮೌನಿಕಾ ರೆಡ್ಡಿ ಜತೆ ಎರಡನೇ ಮದುವೆ ಆದ್ರು.

Related Video