ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ನಟ ವಿಶಾಲ್; ಆಶ್ಲೇಷ ಬಲಿ ಪೂಜೆ ನೆರವೇರಿಸಿದ ತಮಿಳು ಸ್ಟಾರ್

ತಮಿಳಿನ ಖ್ಯಾತ ನಟ ವಿಶಾಲ್ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Share this Video
  • FB
  • Linkdin
  • Whatsapp

ತಮಿಳಿನ ಖ್ಯಾತ ನಟ ವಿಶಾಲ್ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸ್ನೇಹಿತರ ಜೊತೆ ವಿಶಾಲ್ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟಿದ್ದರು. ದೇವರ ಆಶೀರ್ವಾದ ಪಡೆದು ಧನ್ಯರಾಗಿದ್ದಾರೆ. ಅಂದಹಾಗೆ ವಿಶಾಲ್, ಜಾತಕದಲ್ಲಿ ನಾಗದೋಷ ಇರುವ ಹಿನ್ನೆಲೆ ಆಶ್ಲೇಷ ಬಲಿ ಪೂಜೆ ನೆರವೇರಿಸಿದ್ದಾರೆ. ವಿಶಾಲ್ ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಶಾಲ್ ನೋಡಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಇತ್ತೀಚಿಗಷ್ಟೆ ವಿಶಾಲ್ ಮೈಸೂರಿನ ಶಕ್ತಿದಾಮಕ್ಕೆ ಭೇಟಿ ನೀಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ನಿಧನದ ಬಳಿಕ ರಾಜು ಕುಟುಂಬ ಅವಕಾಶ ಕೊಟ್ಟರೆ ಶಕ್ತಿದಾಮದ ಮಕ್ಕಳನ್ನು ನೋಡಿಕೊಳ್ಳುವುದಾಗಿ ವಿಶಾಲ್ ಹೇಳಿದ್ದರು. ಇದೀಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

Related Video