ಸೂರ್ಯಕಾಂತಿ ಚಿತ್ರದ ನಟಿ ರೆಜಿನಾ ಫಿಟ್ನೆಸ್ ರಹಸ್ಯ: ಎರಡು ದಶಕಗಳ ಸೌಂದರ್ಯದ ಗುಟ್ಟೇನು?

ಎರಡು ದಶಕಗಳಿಂದ ಸಿನಿರಂಗದಲ್ಲಿ ಸಕ್ರಿಯವಾಗಿರುವ ನಟಿ ರೆಜಿನಾ ತಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದು ಈ ಲೇಖನದ ವಿಷಯ. ಜಿಮ್ ವರ್ಕೌಟ್ ಮತ್ತು ಫೈಟಿಂಗ್ ಮೂಲಕ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುವ ರೆಜಿನಾ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವರ್ಕೌಟ್ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

First Published Jan 6, 2025, 3:34 PM IST | Last Updated Jan 6, 2025, 3:34 PM IST

ರೆಜಿನಾ ಸೌತ್ ಸಿನಿರಂಗದಲ್ಲಿ ಕಳೆದ ಎರಡು ದಶಕದಿಂದಲೂ ಆಕ್ಟಿವ್ ಆಗಿರೋ ನಟಿಮಣಿ. ಕನ್ನಡದ ಸೂರ್ಯಕಾಂತಿ ಸಿನಿಮಾದಲ್ಲಿ ನಟಿಸಿದ್ದ ಈ ನಟಿಮಣಿ ಸೌತ್ ನ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿ ಮೋಡಿ ಮಾಡಿದ್ದಾಳೆ.

ಸಿನಿರಂಗಕ್ಕೆ ಬಂದು ಎರಡು ದಶಕ  ಕಳೆದರೂ ಈಕೆಗೆ ಸಿಗುವ ಅವಕಾಶಗಳು ಕಮ್ಮಿ ಆಗಿಲ್ಲ. ಜೊತೆಗೆ ರೆಜಿನಾ ಮೈಮಾಟ ಕೂಡ ಒಂಚೂರು ಬದಲಾಗಿಲ್ಲ. ಈ ಸಪೂರ ಸುಂದರಿಯ ತೂಕದಲ್ಲಿ ಒಂದು ಗ್ರಾಂ ಹೆಚ್ಚೂ ಆಗಿಲ್ಲ ಒಂದು ಗ್ರಾಂ ಕಮ್ಮಿನೂ ಆಗಿಲ್ಲ. ತನ್ನ ಈ ಸೌಂದರ್ಯದ ಗುಟ್ಟು ಜಿಮ್ ಕಸರತ್ತು ಅನ್ನೋ ಈ ಚೆಲುವೆ ಸೋಷಿಯಲ್ ಮಿಡಿಯಾದಲ್ಲಿ ತನ್ನ ವರ್ಕೌಟ್ ವಿಡಿಯೋಸ್ ಕೂಡ ಹಾಕ್ತಾ ಇರ್ತಾಳೆ. 

ಕೋಮಲಾಂಗಿ ರೆಜಿನಾ ಜಿಮ್​ನಲ್ಲಿ ಕಠಿಣಾತಿ ಕಠಿಣ ವರ್ಕೌಟ್ ಮಾಡ್ತಾಳೆ. ಅಷ್ಟೇ ಅಲ್ಲ ಫೈಟಿಂಗ್ ಕೂಡ ಕಲಿತಿದ್ದಾಳೆ. ಜಿಮ್ ವೇರ್ ಧರಿಸಿ ಈ ಚೆಲುವೆ ಕಸರತ್ತು ಮಾಡ್ತಿದ್ರೆ ಅದರ ಚೆಂದ ವರ್ಣಿಸೋಕೆ ಸಾಧ್ಯ ಇಲ್ಲ. ಅಂತೆಯೇ ಮೌನಿ ನಾನು ಅಂತ ಈಕೆಯದ್ದೇ ಹಾಡು ಕೇಳಿಕೊಂಡು ಮೂಕವಿಸ್ಮಿತ ಆಗಬೇಕಷ್ಟೇ.