Asianet Suvarna News Asianet Suvarna News

Rajinikanth: ಮತ್ತೆ ಮರು ಬಿಡುಗಡೆ ಆಗುತ್ತಿದೆ ಬಾಬಾ: ಹೊಸ ಟ್ರೈಲರ್ ರಿಲೀಸ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಾಬಾ ಸಿನಿಮಾ, 20 ವರ್ಷಗಳ ನಂತರ ಮತ್ತೆ ಮರು ಬಿಡುಗಡೆ ಆಗುತ್ತಿದೆ. ಹೊಸ ಟ್ರೈಲರ್ ರಿಲೀಸ್ ಆಗಿದೆ.
 

ಸೂಪರ್ ಸ್ಟಾರ್ ರಜನಿಕಾಂತ್ ಸಿನಿ ಜರ್ನಿಯಲ್ಲಿ ಅಮೋಘ ಸಿನಿಮಾ ಬಾಬಾ. ರಜನಿಕಾಂತ್ ಅವರೇ ಕತೆ ಬರೆದು ನಾಯಕನಾಗಿ ನಟಿಸಿ ನಿರ್ಮಾಣ ಮಾಡಿದ್ದ ಸಿನಿಮಾ ಇದು. 2002ರಲ್ಲಿ ತೆರೆ ಕಂಡ ಬಾಬಾ ಸಿನಿಮಾ ಅಂದು ಸೂಪರ್ ಹಿಟ್ ಆಗಿತ್ತು. ಅಷ್ಟೆ ಅಲ್ಲ ರಜನಿಕಾಂತ್ ಅವರನ್ನು ಆಧ್ಯಾತ್ಮದ ಕಡೆ ವಾಲುವಂತೆ ಮಾಡಿದ್ದ ಸಿನಿಮಾ ಕೂಡ ಹೌದು. ಇದೀಗ ಇದೇ ಬಾಬಾ ಸಿನಿಮಾ 20 ವರ್ಷಗಳ ನಂತರ ಮತ್ತೆ ಮರು ಬಿಡುಗಡೆ ಆಗುತ್ತಿದೆ. ಇತ್ತೀಚೆಗಷ್ಟೆ ಬಾಬಾ ಸಿನಿಮಾದಲ್ಲಿ ತನ್ನ ಪಾತ್ರಕ್ಕೆ ಮತ್ತೆ ಡಬ್ಬಿಂಗ್ ಮಾಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಬಾಬಾ ಸಿನಿಮಾದ ಹೊಸ ಟ್ರೈಲರ್ ಅನ್ನ ರಿಲೀಸ್ ಮಾಡಿದ್ದಾರೆ. ಬಾಬಾ ಸಿನಿಮಾ ಈಗ ಬಿಡುಗಡೆ ಆಗುತ್ತಿರೋದಕ್ಕೆ ಕಾರಣ ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ ಸ್ಫೂರ್ತಿಯಂತೆ. 

ಉದ್ಯಮಿ ಸೊಹೇಲ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ 'ಬಿಂದಾಸ್' ನಟಿ ಹನ್ಸಿಕಾ; ಫೋಟೋ ರಿವೀಲ್