ಮೇಕಪ್ ಹಾಕೋದನ್ನೇ ಬಿಟ್ಟಿದ್ದಾರೆ ನಟಿ ನಯನತಾರಾ: ಕಾರಣ ರಿವೀಲ್..!
ನಯನತಾರಾ ಮೇಕಪ್ ಹಾಕುವುದನ್ನೇ ಬಿಟ್ಟುಬಿಟ್ಟಿದ್ದಾರಂತೆ. ಅವರು ಪತಿಗೆ ಸಹಜವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದಕ್ಕೆ ಕಾರಣ ಏನು ಅಂತೀರಾ..? ಇಲ್ಲಿದೆ ನೋಡಿ..
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮೇಕಪ್ ಹಾಕೋದೇ ಇಲ್ವಂತೆ. ಹೌದು, ನಯನತಾರಾ ಮೇಕಪ್ ಹಾಕುವುದನ್ನೇ ಬಿಟ್ಟುಬಿಟ್ಟಿದ್ದಾರಂತೆ. ಅವರು ಪತಿಗೆ ಸಹಜವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದಕ್ಕೆ ಕಾರಣ ಏನು ಅಂತೀರಾ..? ಇತ್ತೀಚೆಗಷ್ಟೇ, ನಟಿ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಎರಡು ಮಕ್ಕಳನ್ನು ಲಾಲನೆ ಪಾಲನೆ ಮಾಡುತ್ತಿದ್ದಾರೆ. ಮಕ್ಕಳು, ಆಗಾಗ ತಾಯಿಯನ್ನು ಮುಟ್ಟುವುದು, ಮುತ್ತು ಕೊಡೋದು ಮಾಡುತ್ತಿರುತ್ತಾರೆ. ಅದೇ ರೀತಿ, ತಾಯಿಯೂ ಮಕ್ಕಳನ್ನು ಮುದ್ದಾಡಬೇಕಲ್ಲ. ಈ ಹಿನ್ನೆಲೆ ಕಾಸ್ಮೆಟಿಕ್ಸ್‌ನಿಂದ ದೂರವಿರಲು ಮೇಕಪ್ ಹಾಕೋದೇ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.