ಫಿಕ್ಸ್ ಆಗಿತ್ತು ಸಲ್ಲು ಮದುವೆ, ಪ್ರಿಂಟ್ ಆಗಿತ್ತು ಕಾರ್ಡ್: ಆದ್ರೂ ಆಗಿಲ್ಲ ಮದುವೆ!

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಮೇ 27-1994 ರಂದು ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ ಜೋಡಿಯ ಮದುವೆ ಆಗಬೇಕಿತ್ತು. 1986ರಿಂದಲೂ ಪರಸ್ಪರ ಡೇಟಿಂಗ್ ಮಾಡ್ತಿದ್ದ ಈ ಜೋಡಿ ಬಾಲಿವುಡ್​ನ ಕ್ಯೂಟ್ ಕಪಲ್ ಅನ್ನಿಸಿಕೊಂಡಿತ್ತು. ಆದ್ರೆ 8 ವರ್ಷಗಳ ಇವರ ಸಂಬಂಧ ಸಲ್ಲುಮಿಯಾ ವರ್ತನೆ ಕಾರಣದಿಂದ ಮುರಿದುಬಿದ್ದಿತ್ತು. ಯಾಕೆ ಹಾಗಾಯ್ತು?..

First Published Jan 4, 2025, 11:47 AM IST | Last Updated Jan 4, 2025, 11:47 AM IST

ಒಂದು ಕಾಲದಲ್ಲಿ ಬಾಲಿವುಡ್​ ಟೈಗರ್ ಸಲ್ಲುಮಿಯಾನ ಎಲ್ಲರೂ 'ಮದುವೆ ಯಾವಾಗ', ಮದುವೆ ಯಾವಾಗ'.. ಅಂತ ಕೇಳ್ತಾನೇ ಇದ್ರು. ಹಲವು ಸುರಸುಂದರಿಯರೂ ಸಲ್ಲುನ ಒಂದೇ ಒಂದು ಕಣ್ಣ ಇಶಾರೆಗೆ ಕಾಯ್ತಾ ಇದ್ರು. ಆದ್ರೀಗ  ಸಲ್ಮಾನ್ ಖಾನ್ ಗೆ 60 ತುಂಬೋಕೆ ಒಂದೇ ವರ್ಷ ಬಾಕಿ ಇದೆ. ಸಲ್ಲು ಮದುವೆ ಅನ್ನೋದು ಮುಗಿದ ಅಧ್ಯಾಯ ಅಂತ ಎಲ್ಲರೂ ಸುಮ್ಮನಾಗಿದ್ದಾರೆ. ಆದ್ರೆ ಮೂರು ದಶಕದ ಹಿಂದೆ ಸಲ್ಲು ಜೊತೆ ಹಸೆಮಣೆ ಏರಬೇಕಿದ್ದ ಸುಂದರಿ ಈಗ ಹಳೇ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ಜೊತೆ ಮದುವೆ ಮುರಿದಿದ್ದೇಕೆ ಅನ್ನೋದನ್ನ ರಿವೀಲ್ ಮಾಡಿದ್ದಾರೆ.

ಬಾಲಿವುಡ್ ಹ್ಯಾಂಡಸಮ್ ಹಂಕ್, 1990ರ ದಶಕದ ಯುವತಿಯರ ಕನಸಿನ ರಾಜಕುಮಾರ, ಬಾಲಿವುಡ್ ಟೈಗರ್ ಸಲ್ಮಾನ್ ಮದುವೆ ವಿಷ್ಯ ಮತ್ತೆ ಸದ್ದು ಮಾಡ್ತಾ ಇದೆ. ಅರೇ ಈಗ್ಯಾಕೆ ಸಲ್ಮಾನ್ ಮದುವೆ ವಿಚಾರ, ಈ ವರ್ಷ ಡಿಸೆಂಬರ್ ಬಂದ್ರೆ ಸಲ್ಮಾನ್​ಗೆ 60 ತುಂಬುತ್ತೆ. ನಮ್ಮ ಸಲ್ಲುಮಿಯಾ ಸೀನಿಯರ್ ಸಿಟಿಜನ್ ಆಗಲಿದ್ದಾರೆ, ಈ ಹೊತ್ತಲ್ಯಾಕೆ ಮದುವೆ ವಿಚಾರ ಅಂತೀರಾ.. ಅದಕ್ಕೆ ಕಾರಣ ಸಂಗೀತಾ ಬಿಜಲಾನಿ.

ನಟಿ ಸಂಗೀತಾ ಬಿಜಲಾನಿ ಇತ್ತೀಚಿಗೆ ಹಿಂದಿಯ ಸಿಂಗಿಂಗ್ ಶೋವೊಂದರಲ್ಲಿ ಜಡ್ಜ್​ ಆಗಿ ಭಾಗವಹಿಸ್ತಾ ಇದ್ದಾರೆ. ಅದ್ರಲ್ಲಿ ಸ್ಪರ್ಧಿಯೊಬ್ರು ಸಂಗೀತಾಗೆ ಪ್ರಶ್ನೆಯೊಂದನ್ನ ಕೇಳಿದ್ದಾರೆ. ನಿಮ್ಮ ಮತ್ತು ಸಲ್ಮಾನ್ ಖಾನ್ ಮದುವೆ ಕಾರ್ಡ್ ಪ್ರಿಂಟ್ ಆಗಿತ್ತಂತೆ ಅದು ಮುರಿದು ಬಿದ್ದಿದ್ದು ಯಾಕೆ ಅಂತ ಕೇಳ್ತಾರೆ. ಅದಕ್ಕೆ ಇತರ ಜಡ್ಜಸ್ ಕೂಡ ಏನಾಯ್ತು ಹೇಳಿ ಅಂತಾರೆ. ಆಗ ಸಂಗೀತಾ ಅಸಲಿ ಕಥೆ ತೆರೆದಿಡ್ತಾರೆ.

ನನ್ನ ಹಳೆಯ ಪ್ರೇಮಿಗಳೆಲ್ಲ ನನ್ನನ್ನ ತುಂಬಾ ಹದ್ದುಬಸ್ತಿನಲ್ಲಿಡುವ ಪ್ರಯತ್ನಮಾಡ್ತಾ ಇದ್ರು. ಬಟ್ಟೆಯ ವಿಚಾರದಲ್ಲಿ ತುಂಬಾ ಮೂಗು ತೂರಿಸ್ತಾ ಇದ್ರು.   ಇವರೆಲ್ಲರ ಈ ನಿಯಮಗಳನ್ನ ಪಾಲಿಸಲು ನನ್ನಿಂದ ಸಾಧ್ಯವಾಗಲಿಲ್ಲ ಎಂದಿರುವ ಸಂಗೀತಾ ಅವರ ಆ ಸ್ವಭಾವದಿಂದ ಮದುವೆಯನ್ನ ಮುರಿದುಕೊಂಡೆ ಎಂದಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಮೇ 27-1994 ರಂದು ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ ಜೋಡಿಯ ಮದುವೆ ಆಗಬೇಕಿತ್ತು. 1986ರಿಂದಲೂ ಪರಸ್ಪರ ಡೇಟಿಂಗ್ ಮಾಡ್ತಿದ್ದ ಈ ಜೋಡಿ ಬಾಲಿವುಡ್​ನ ಕ್ಯೂಟ್ ಕಪಲ್ ಅನ್ನಿಸಿಕೊಂಡಿತ್ತು. ಆದ್ರೆ 8 ವರ್ಷಗಳ ಇವರ ಸಂಬಂಧ ಸಲ್ಲುಮಿಯಾ ವರ್ತನೆ ಕಾರಣದಿಂದ ಮುರಿದುಬಿದ್ದಿತ್ತು. ಹೆಚ್ಚಿನಮಾಹಿತಿಗೆ ವಿಡಿಯೋ ನೋಡಿ..