Asianet Suvarna News Asianet Suvarna News

‘Raj B Shetty ಅವರಿಗೆ ಸ್ವಾಗತ’: ಹೊಸ ಚಿತ್ರದಲ್ಲಿ ಮಮ್ಮುಟ್ಟಿ ಜತೆ ರಾಜ್ ಬಿ ಶೆಟ್ಟಿ!

ಮಮ್ಮೂಟ್ಟಿ ಜತೆ ರಾಜ್ ಬಿ ಶೆಟ್ಟಿ: ನಟ ರಾಜ್ ಬಿ ಶೆಟ್ಟಿ ಈಗ ಮಲೆಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಮಲೆಯಾಳಂ ನಟ ಮಮ್ಮೂಟಿ ಅವರು ಮಲಯಾಳಂ ಸಿನಿಮಾ ‘ಟರ್ಬೋ’ದಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದು, ಮಮ್ಮೂಟಿ ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
 

ಮಮ್ಮೂಟ್ಟಿ ಜತೆ ರಾಜ್ ಬಿ ಶೆಟ್ಟಿ: ನಟ ರಾಜ್ ಬಿ ಶೆಟ್ಟಿ ಈಗ ಮಲೆಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಮಲೆಯಾಳಂ ನಟ ಮಮ್ಮೂಟಿ ಅವರು ಮಲಯಾಳಂ ಸಿನಿಮಾ ‘ಟರ್ಬೋ’ದಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದು, ಮಮ್ಮೂಟಿ ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರ ಕಡೆಯಿಂದಲೇ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ‘ರಾಜ್ ಬಿ. ಶೆಟ್ಟಿ ಅವರಿಗೆ ಸ್ವಾಗತ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಮಮ್ಮೂಟ್ಟಿ.

ಸುದೀಪ್ ಕತ್ತೆ ಅಂದಿದ್ದು ಯಾರಿಗೆ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸೈಡ್ ಬಿ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಖುಷಿಗೆ ಕಿಚ್ಚನ ಸ್ವೀಟ್ ರಿವ್ಯೂ ಸೇರಿಕೊಂಡಿದೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ನೋಡಿದ ಸುದೀಪ್ ಈ ಸಿನಿಮಾ ಮಾಸ್ಟರ್ ಪೀಸ್ ‘ಅತ್ಯುತ್ತಮ ನಟನೆ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ. ಇಂಥಹ ಸಿನಿಮಾ ಮಾಡಿದ  ನಿಮ್ಮನ್ನು ನಾನು ಬಹಳ ಗೌರವಿಸುತ್ತೇನೆ. ಹೇಮಂತ್ ರಾವ್ ಅದ್ಭುತ  ನಿರ್ದೇಶಕ ಎಂದಿದ್ದಾರೆ, ಅಷ್ಟೆ ಅಲ್ಲ ರುಕ್ಮಿಣಿ ವಾಸಂತಾ ಅವರ ನಟನೆಯನ್ನ ಕೊಂಡಾಡಿದ್ದಾರೆ.

ಕೆಸಿಸಿ ಟೂರ್ನಿಗೆ ಸಜ್ಜಾದ ಸ್ಯಾಂಡಲ್ವುಡ್: ಕನ್ನಡ ಚಿತ್ರರಂಗದಲ್ಲಿ ಈಗ ಮತ್ತೆ ಕ್ರಿಕೆಟ್ ಹಬ್ಬ ಶುರುವಾಗಿದೆ. ನಟ ಕಿಚ್ಚ ಸುದೀಪ್ ಸಾರಧ್ಯದ ಕೆಸಿಸಿ ಟೂರ್ನಿ ಸೀಸನ್ 4 ಮುಂದಿನ ತಿಂಗಳು ನಡೆಯಲಿದ್ದು, ಈ ವಿಷಯವನ್ನ ನಟ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ಮತ್ತೆ ಸ್ಯಾಂಡಲ್ವುಡ್ ಸ್ಟಾರ್ ನಟರೆಲ್ಲಾ ಒಂದೆಡಡೆ ಸೇರಲು ವೇಧಿಕೆ ಸಿದ್ಧವಾಗ್ತಿದೆ.

ಬರ್ತಿದೆ 'ಸುವರ್ಣ Jackpot': ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾಕಾಲ ಯಶಸ್ವಿಯಾಗಿದೆ. ಈಗ ಪ್ರೇಕ್ಷಕರಿಗೆ ಇನ್ನಷ್ಟು ಮನೋರಂಜನೆ ನೀಡಲು "ಸುವರ್ಣ Jackpot" . ಅನ್ನೋ ಗೇಮ್ ಶೋ ಆರಂಭ ಆಗ್ತಿದೆ. ಈ ಶೋ ನಲ್ಲಿ ಸೆಲೆಬ್ರಿಟಿಗಳು ಭಾಗವಹಿಸಲಿದ್ದು, ಪ್ರತಿ ವಾರ 2 ತಂಡಗಳು ಭಾಗವಹಿಸುತ್ತದೆ. ನಿರೂಪಕಿ ಅನುಪಮ ಗೌಡ ನಿರೂಪಣೆ ಮಾಡಲಿದ್ದಾರೆ.'ಸುವರ್ಣ Jackpot' ಇದೇ ನವೆಂಬರ್ 26 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರ ಆಗಲಿದೆ.

Video Top Stories