600 ಮೆಟ್ಟಿಲು ಹತ್ತಿ, ಕರ್ಪೂರ ಹಚ್ಚಿ ಪಳನಿ ಮುರುಗನ್ ದೇವಸ್ಥಾನಕ್ಕೆ ಹರಕೆ ತೀರಿಸಿದ ಸಮಂತಾ

ಸಮಂತಾ ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ  ತೀರಿಸಿದ್ದಾರೆ. ದೇವಸ್ಥಾನದ ಸುಮಾರು 600 ಮೆಟ್ಟಿಗಳನ್ನು ಸಮಂತಾ ಹತ್ತಿ ಕರ್ಪೂರ ಹಚ್ಚಿ  ದೇವರ ದರ್ಶನ ಪಡೆದರು.

Share this Video
  • FB
  • Linkdin
  • Whatsapp

ನಟಿ ಸಮಂತಾ ಸದ್ಯ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತೆ ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಇತ್ತೀಚಿಗೆ ಸಮಂತಾ ಆಧ್ಯಾತ್ಮಿಕ ಕಡೆ ಹೆಚ್ಚು ವಾಲುತ್ತಿದ್ದಾರೆ. ಇದೀಗ ಸಮಂತಾ ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ದೇವಸ್ಥಾನದ ಸುಮಾರು 600 ಮೆಟ್ಟಿಗಳನ್ನು ಸಮಂತಾ ಹತ್ತಿ ಕರ್ಪೂರ ಹಚ್ಚಿ ದೇವರ ದರ್ಶನ ಪಡೆದರು. ಸಮಂತಾ ಜೊತೆಗೆ ಸ್ನೇಹಿತರು ಮತ್ತು ನಿರ್ದೇಶಕರು ಸೇರಿದಂತೆ ಸಿನಿಮಾತಂಡ ಕೂಡ ಜೊತೆಯಲ್ಲಿತ್ತು. ದೇವರ ದರ್ಶನ ಪಡೆದು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ರು. ಸಮಂತಾ ಸದ್ಯ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಇದೀಗ ಹಿಂದಿಯ ಸಿಟಾಡೆಲ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ.

Related Video