ನಯನತಾರಾ ಕಡೆಯಿಂದ ಫ್ಯಾನ್ಸ್‌ಗೆ ಶಾಕಿಂಗ್ ಸುದ್ದಿ; ನಟನೆಗೆ ಗುಡ್ ಬೈ ಹೇಳ್ತಾರಾ ಲೇಡಿ ಸೂಪರ್ ಸ್ಟಾರ್?
ನಯನತಾರ ತನ್ನ ಸಿನಿ ಪಯಣಕ್ಕೆ ಗುಡ್ ಬೈ ಹೇಳೋ ನಿರ್ಧಾರ ತೆಗೆದುಕೊಂಡಿದ್ದಾರಂತೆ ಎನ್ನುವ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ.
ಮದುವೆ ಆದ್ಮೇಲೆ ಹೀರೋಯಿನ್‌ಗೆ ಡಿಮ್ಯಾಂಡ್ ಕಡಿಮೆ ಆಗುತ್ತೆ ಎನ್ನುವ ಕಾಲ ಒಂದಿತ್ತು. ಆದರೆ ಈಗ ಹಾಗಿಲ್ಲ. ಮದುವೆ ಆದಮೇಲು ಬ್ಯುಸಿಯಾಗಿರುವ ಸಾಕಷ್ಟು ನಟಿಯರು ಚಿತ್ರರಂಗದಲ್ಲಿದ್ದಾರೆ. ಅದರಲ್ಲೂ ನಯನತಾರಾ ಅಂತೂ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿ. ವಿಗ್ನೇಷ್ ಅವರನ್ನು ಮದುವೆ ಆದ್ಮೇಲೂ ಈ ಬ್ಯೂಟಿ ಸಂಭಾವನೆ ಹೆಚ್ಚಿಸಿಕೊಂಡು ಮತ್ತಷ್ಟು ಬ್ಯುಸಿಯಾಗಿದ್ದಾರೆ. ಆದ್ರೆ ಇದೀಗ ನಯನತಾರಾ ಬಳಗದಿಂದ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯಕ್ಕೆ, ಬ್ಯೂಟಿಗೆ ಬೋಲ್ಡ್ ಆಗದೇ ಇರೋರಿಲ್ಲ. ದೊಡ್ಡ ಫ್ಯಾನ್ ಭೇಸ್ ಹೊಂದಿರೋ ಸೌತ್ ಚೆಲುವೆ ನಯನತಾರ. ಬಹುಭಾಷಾ ನಟಿಯಾಗಿ ಸೈ ಎನಿಸಿಕೊಂಡಿರೋ ಲೇಡಿ ಸೂಪರ್ ಸ್ಟಾರ್, ಇತ್ತೀಚಿಗಷ್ಟೇ ನಿರ್ದೇಶಕ ವಿಘ್ನೇಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 19 ವರ್ಷಗಳಿಂದ ಚಿತ್ರರಂಗದಲ್ಲಿರುವ ನಟಿ ನಯನತಾರಾ, 10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇಷ್ಟೊಂದು ಪೀಕ್ನಲ್ಲಿ ಇರುವಾಗ್ಲೆ ನಯನತಾರ ತನ್ನ ಸಿನಿ ಪಯಣಕ್ಕೆ ಗುಡ್ ಬೈ ಹೇಳೋ ನಿರ್ಧಾರ ತೆಗೆದುಕೊಂಡಿದ್ದಾರಂತೆ. ನಯನತಾರ ಚಿತ್ರರಂಗದಿಂದ ದೂರಾಗಿ ತನ್ನ ವೈವಾಹಿಕ ಬದಕಿಗೆ ತಮ್ಮನ್ನ ತಾವು ಅರ್ಪಿಸಿಕೊಳ್ಳೋ ಡಿಸೈಡ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ಇದಕ್ಕೂ ಮೊದಲು ಈ ಹಿಂದೆಯೇ ನಟಿಸಲು ಒಪ್ಪಿಕೊಂಡ ಮೂರು ಬಿಗ್ ಸಿನಿಮಾಗಳನ್ನ ಕಂಪ್ಲೀಟ್ ಮಾಡುತ್ತಾರಂತೆ. ಈ ಸಿನಿಮಾಗಳ ನಂತರ ನಯನತಾರ ನಟನೆಗೆ ವಿದಾಯ ಹೇಳಲಿದ್ದಾರೆ ಅನ್ನೋ ಸುದ್ದಿ ಇದೀಗ ಹರಿದಾಡುತ್ತಿದೆ.