ರಿವೀಲ್ ಆಯ್ತು ರಾಜಮೌಳಿ-ಪ್ರಿನ್ಸ್ ಮಹೇಶ್ ಬಾಬು ಸಿನಿಮಾ ಸೀಕ್ರೆಟ್!

ಥ್ರಿಬಲ್ ಆರ್ ಸಿನಿಮಾ ಸಕ್ಸಸ್ ನಂತ್ರ ರಾಜಮೌಳಿ , ಮಹೇಶ್ ಬಾಬು ಜೊತೆ ಸಿನಿಮಾ ಮಾಡಲಿದ್ದಾರೆ ಅನ್ನೋದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಆದ್ರೆ ಆ ಸಿನಿಮಾ ಹೇಗಿರಲಿದೆ ಅನ್ನೋ ಸೀಕ್ರೆಟ್ ರಿವಿಲ್ ಆಗಿದೆ ಅದನ್ನ ಕೇಳಿನೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. 

First Published Sep 15, 2022, 9:41 AM IST | Last Updated Sep 15, 2022, 9:41 AM IST

ಥ್ರಿಬಲ್ ಆರ್ ಸಿನಿಮಾ ಸಕ್ಸಸ್ ನಂತ್ರ ರಾಜಮೌಳಿ, ಮಹೇಶ್ ಬಾಬು ಜೊತೆ ಸಿನಿಮಾ ಮಾಡಲಿದ್ದಾರೆ ಅನ್ನೋದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಆದ್ರೆ ಆ ಸಿನಿಮಾ ಹೇಗಿರಲಿದೆ ಅನ್ನೋ ಸೀಕ್ರೆಟ್ ರಿವಿಲ್ ಆಗಿದೆ ಅದನ್ನ ಕೇಳಿನೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಮಹೇಶ್ ಬಾಬು ಗ್ಲೋಬ್ಟ್ರೋಟಿಂಗ್ ಆಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಾಜಮೌಳಿ ಅದಕ್ಕಾಗಿ ಪ್ರೀ ಪ್ರೊಡಕ್ಷನ್ ಕೆಲಸ ಶುರು ಮಾಡಿದ್ದು, ಕೇವಲ ನ್ಯಾಷನಲ್ ಲೆವೆಲ್ ಅಲ್ಲ ಪ್ಯಾನ್ ವರ್ಲ್ಡ್‌ನಲ್ಲಿ ರಿಲೀಸ್ ಆಗಲಿದೆ. ಭರ್ಜರಿ ಸಾಹಸಭರಿತ ಜರ್ನಿಯ ಕಥೆಯನ್ನ ಪ್ರೇಕ್ಷಕರ ಮುಂದೆ ತರಲಿದ್ದಾರೆ ಜಕ್ಕಣ್ಣ. ಸಿನಿಮಾ, ಪಾತ್ರ ಅಂತ ಬಂದಾಗ ಡೆಡಿಕೇಷನ್ ಮಸ್ಟ್ ಅನ್ನೋದು ಕಲಾವಿದರಿಗೆ ಯಾವಾಗಲೂ ಗೊತ್ತಿರಬೇಕು. 28 ಸಿನಿಮಾಗಳಲ್ಲಿ ನಾಯಕನಾಗಿದ್ದರು ಮಹೇಶ್ ಬಾಬು, ರಾಜಮೌಳಿ ಜೊತೆಗಿನ ಚಿತ್ರಕ್ಕೆ ಎರಡು ತಿಂಗಳು ವರ್ಕ್ ಶಾಪ್‌ನಲ್ಲಿ ಭಾಗಿ ಆಗಲಿದ್ದಾರಂತೆ. ಈಗಾಗಲೇ ತಮ್ಮ 28ನೇ ಚಿತ್ರದ ಶೂಟಿಂಗ್ ಶುರು ಮಾಡಿದ್ದು, ರಾಜಮೌಳಿ ಜೊತೆಗಿನ ಸಿನಿಮಾ 2023ಕ್ಕೆ ಶುರುವಾಗಲಿದೆ. ಅಷ್ಟರಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗಿನ ಚಿತ್ರ  ಮುಗಿಸಿ ವರ್ಕ್ ಶಾಪ್‌ನಲ್ಲಿ ಬ್ಯುಸಿ ಆಗಲಿದ್ದಾರೆ. ಇದಕ್ಕಾಗಿ ಮಹೇಶ್ ಬಾಬು ಲುಕ್, ಮ್ಯಾನರಿಸಂ ಎಲ್ಲವೂ ಬದಲಾಗಲಿದೆ. ಒಟ್ಟಾರೆ ರಾಜಮೌಳಿ -ಮಹೇಶ್ ಬಾಬು ಕಾಂಬಿನೇಷನ್ ಚಿತ್ರದಲ್ಲಿ ಇಷ್ಟೆಲ್ಲಾ ಇರಲಿದೆ ಅನ್ನೋದು ಕೇಳಿ ಫ್ಯಾನ್ಸ್ ಸಖತ್ ಕ್ಯೂರಿಯಸ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment